Raichuru – ಬಸ್ ಓಡಿಸುವಾಗಲೇ ಚಾಲಕನಿಗೆ ಹೃದಯಾಘಾತ
ಬಸ್ ಪಲ್ಟಿಯಾಗಿ ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು
ರಾಯಚೂರಿನ ಚಿಕ್ಕಹೆಸರೂರು ಗ್ರಾಮದಲ್ಲಿ ಘಟನೆ
ಶ್ರೀನಿವಾಸ್ ನಾರಾಯಣ ಗೌಡ ಮೃತ ಚಾಲಕ
ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ರಾಯಚೂರು : ಬಸ್ ಚಲಾಯಿಸುತ್ತಿದ್ದಾಗ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದು, ಬಸ್ ಪಲ್ಟಿಯಾದ ಘಟನೆ ರಾಯಚೂರಿನ ಚಿಕ್ಕಹೆಸರೂರು ಗ್ರಾಮದಲ್ಲಿ ನಡೆದಿದೆ. 52 ವರ್ಷದ ಶ್ರೀನಿವಾಸ್ ನಾರಾಯಣ ಮೃತಪಟ್ಟ ಬಸ್ ಚಾಲಕ.
ಹೃದಯಾಘಾತದಿಂದ ಚಾಲಕ ಅಸ್ವಸ್ಥಗೊಂಡ ಕಾರಣ ರಾಜಹಂಸ ಬಸ್ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ.
ಈ ವೇಳೆ ನಿರ್ವಾಹಕ ಸೇರಿದಂತೆ 15 ಪ್ರಯಾಣಿಕರು ಗಾಯಗೊಂಡಿದ್ದರು.

ಘಟನೆಯಲ್ಲಿ ಓರ್ವ ಮಹಿಳೆಗೆ ತೀವ್ರ ಸ್ವರೂಪದ ಗಾಯವಾಗಿದೆ.
ಅವರನ್ನು ಲಿಂಗಸೂಗೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಬಸ್ ರಾಯಚೂರಿನಿಂದ ಬೆಳಗಾವಿಗೆ ಸಂಚಾರ ಮಾಡುತ್ತಿತ್ತು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







