ರಾಯ್ಗಡ್- ಐದು ಅಂತಸ್ತಿನ ಕಟ್ಟಡ ಕುಸಿತ – 70 ಕ್ಕೂ ಹೆಚ್ಚು ಜನರು ಸಿಲುಕಿರುವ ಸಾಧ್ಯತೆ
ರಾಯ್’ಗಡ, ಅಗಸ್ಟ್24: ರಾಯ್ಗಡ್ ದ ಮಹಾಡ್ ನಲ್ಲಿ ಐದು ಅಂತಸ್ತಿನ ಕಟ್ಟಡ ಸೋಮವಾರ ಸಂಜೆ ಕುಸಿದಿದ್ದರಿಂದ ಹದಿನೇಳು ಜನರು ಗಾಯಗೊಂಡಿದ್ದು, 70 ಕ್ಕೂ ಹೆಚ್ಚು ಜನರು ಸಿಕ್ಕಿಬಿದ್ದಿದ್ದಾರೆ ಎಂದು ವರದಿಗಳು ತಿಳಿಸಿದೆ. ಪುಣೆಯಿಂದ ಮೂರು ಎನ್ಡಿಆರ್ಎಫ್ ತಂಡಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.
ಸಂಜೆ 6: 50 ರ ಸುಮಾರಿಗೆ ಕಾಜಲ್ಪುರ ಪ್ರದೇಶದಲ್ಲಿ ಕಟ್ಟಡ ಕುಸಿದು ಘಟನೆ ನಡೆದಿದೆ ಎಂದು ರಾಷ್ಟ್ರೀಯ ವಿಪತ್ತು ಪಡೆ ಪ್ರತಿಕ್ರಿಯೆ ನೀಡಿದೆ. ಕಟ್ಟಡವು ಸುಮಾರು 47 ಫ್ಲ್ಯಾಟ್ಗಳನ್ನು ಒಳಗೊಂಡಿದೆ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸ್ಥಳೀಯ ರಕ್ಷಣಾ ತಂಡಗಳು ಈಗಾಗಲೇ ಸ್ಥಳದಲ್ಲಿದ್ದರೆ, ಎನ್ಡಿಆರ್ಎಫ್ನ ಹೆಚ್ಚುವರಿ ತಂಡಗಳು ಧಾವಿಸಿದೆ ಎಂದು ಮಹಾರಾಷ್ಟ್ರದ ಕ್ಯಾಬಿನೆಟ್ ಸಚಿವ ಅದಿತಿ ತತ್ಕರೆ ಹೇಳಿದ್ದಾರೆ.
ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಮತ್ತು ಗೃಹ ಸಚಿವ ಅಮಿತ್ ಶಾ ಜನರ ಸುರಕ್ಷತೆಗಾಗಿ ಪ್ರಾರ್ಥಿಸಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶಾಸಕ ಭಾರತ್ ಗೊಗವಾಲೆ ಮತ್ತು ಜಿಲ್ಲಾಡಳಿತ ನಿಧಿ ಚೌಧರಿ ಅವರೊಂದಿಗೆ ಮಾತನಾಡಿ ಘಟನೆ ಬಗ್ಗೆ ವಿಚಾರಿಸಿದ್ದಾರೆ. ಪರಿಹಾರ ಕಾರ್ಯಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಉಪ ಸಿಎಂ ಅಜಿತ್ ಪವಾರ್ ಅವರು ಶೀಘ್ರ ಕಾರ್ಯಾಚರಣೆ ನಡೆಸಲು ಆದೇಶಿಸಿದ್ದಾರೆ