ರೈಲ್ವೇ ಪ್ರಯಾಣಿಕರ ಜೇಬಿಗೆ ಕತ್ತರಿ : ರೈಲು ನಿಲ್ದಾಣಗಳಲ್ಲಿ ವೈಫೈ ಪಡೆಯಲು ಶುಲ್ಕ ನಿಗದಿ..!
ನವದೆಹಲಿ: ರೈಲ್ವೇ ಇಲಾಖೆ ಪ್ರಸ್ತುತ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ಫ್ರೀ ವೈಫೈ ಸೌಲಭ್ಯ ನೀಡಿದೆ. ಆದ್ರೆ ಇದಕ್ಕೆ ಇನ್ಮುಂದೆ ಶುಲ್ಕವನ್ನೂ ನಿಗದಿ ಪಡಿಸಲಾಗಿದೆ. ಹೌದು ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ವೈಫೈಗೆ ಸಂಬಂಧಿಸಿ ಪ್ರಿಪೇಯ್ಡ್ ಪ್ಲಾನ್‌ಅನ್ನು ರೈಲ್ ಟೆಲ್ ಸಂಸ್ಥೆ ಅನಾವರಣಗೊಳಿಸಿದೆ. ಪ್ರಸ್ತುತ ಈ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ದಿನಕ್ಕೆ 30 ನಿಮಿಷಗಳ ಕಾಲ 1ಎಂಬಿಪಿಎಸ್‌ವೇಗದಲ್ಲಿ ಉಚಿತವಾಗಿ ವೈಫೈ ಸೇವೆ ಪಡೆಯುತ್ತಿದ್ದಾರೆ.
ತಂದೆಯ ಮೇಲಿನ ದ್ವೇಷಕ್ಕೆ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ..!
ಇನ್ನು ಮುಂದೆ, ಹೆಚ್ಚಿನ ವೇಗದಲ್ಲಿ ಅಂದರೆ 34 ಎಂಬಿಪಿಎಸ್‌ವೇಗದಲ್ಲಿ ವೈಫೈ ಪಡೆಯಬೇಕೆಂದರೆ ಪ್ರಯಾಣಿಕರು ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಹೌದು ಪ್ರಿಪೇಯ್ಡ್ ಪ್ಲಾನ್ ಗಳನ್ನು ಆನ್ ಲೈನ್ನಲ್ಲಿ ಖರೀದಿಸಬಹುದು. ವ್ಯಾಲೆಟ್ / ಕ್ರೆಡಿಟ್ಕಾರ್ಡ್ / ನೆಟ್ ಬ್ಯಾಂಕಿಂಗ್ ಮೂಲಕ ರೈಲ್ವೇ ಪ್ರೀಪೇಯ್ಡ್ ಪ್ಲಾನ್ ಗಳನ್ನ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಪ್ರಸ್ತುತ ದೇಶದ 5950ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ರೈಲ್ ಟೆಲ್ಕಾರ್ಪೊರೇಷನ್ವೈಫೈ ಸೇವೆ ನೀಡುತ್ತಿದೆ.