Railway over bridge: ಮಹಾರಾಷ್ಟ್ರದ ಚಂದ್ರಾಪುರದ ಬಲ್ಲಾರ್ ಶಾ ರೈಲು ನಿಲ್ದಾಣದ ಫುಟ್ ಓವರ್‌ಬ್ರಿಡ್ಜ್ ನ ಚಪ್ಪಡಿ ಕುಸಿದು ನಾಲ್ವರು ಗಾಯ
ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಇಂದು ಫುಟ್ ಓವರ್‌ಬ್ರಿಡ್ಜ್ ನ ಚಪ್ಪಡಿ ಕುಸಿದು ನಾಲ್ವರು ಗಾಯಗೊಂಡಿದ್ದಾರೆ. ನಗರದ ಬಲ್ಲಾರ್ ಶಾ ರೈಲು ನಿಲ್ದಾಣದಲ್ಲಿ ಇಂದು ಸಂಜೆ 5 ಗಂಟೆಗೆ ಈ ಘಟನೆ ನಡೆದಿದೆ.
ಫುಟ್‌ಬ್ರಿಡ್ಜ್‌ನಲ್ಲಿದ್ದ ಜನರು ಕೆಳಗಿನ ರೈಲು ಹಳಿಗಳ ಮೇಲೆ ಬಿದ್ದಿದ್ದಾರೆ. ಆ ಸಮಯದಲ್ಲಿ ಆ ಹಳಿಗಳಲ್ಲಿ ಯಾವುದೇ ರೈಲು ಓಡುತ್ತಿರಲಿಲ್ಲ. ಆದುದರಿಂದ ಹೆಚ್ಚಿನ ಅನಾಹುತ ನಡೆದಿಲ್ಲ . ಮೇಲಾಗಿ ಇಂದಿ ವಾರದ ರಜಾ ದಿನ ಆಗಿದ್ದು ಜನ ಓಡಾಟ ಕಣ್ಣಿ ಇತ್ತು.
“ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಪುಣೆಗೆ ಹೋಗುವ ರೈಲನ್ನು ಹತ್ತಲು FOB (ಫುಟ್ ಓವರ್‌ಬ್ರಿಡ್ಜ್) ಬಳಸುತ್ತಿದ್ದರು, ಅದರ ಒಂದು ಭಾಗವು ಹಠಾತ್ತನೆ ಕುಸಿದ ಪರಿಣಾಮವಾಗಿ ಕೆಲವರು 20 ಅಡಿ ಕೆಳಗೆ ರೈಲ್ವೆ ಹಳಿ ಮೇಲೆ ಬಿದ್ದಿದ್ದಾರೆ” ಎಂದು ಸರ್ಕಾರಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಅಧಿಕಾರಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
railway-flyover-4-injured-as-slab-of-footbridge-collapses-at-ballar-shah-railway-station-in-chandrapur-maharashtra