ಮುಂಬೈ, ಜೂನ್ 6 : ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ತಾಯಿ, ಬಿಜೆಪಿ ಮುಖಂಡರಾಗಿದ್ದ ಚಂದ್ರಕಾಂತಾ ಗೋಯಲ್ (88) ಇಂದು ಬೆಳಿಗ್ಗೆ ನಿಧನರಾಗಿದ್ದು, ಈ ಕುರಿತು ಸಚಿವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ತಮ್ಮ ತಾಯಿಯ ನಿಧನದ ಸುದ್ದಿಯನ್ನು ಹಂಚಿಕೊಂಡಿರುವ ಪಿಯುಷ್ ಗೋಯಲ್,
ನನಗೆ ಯಾವಾಗಲೂ ಪ್ರೀತಿ, ವಾತ್ಸಲ್ಯ ದಿಂದ ಮಾರ್ಗದರ್ಶನ ನೀಡುತ್ತಿದ್ದ ನಮ್ಮ ತಾಯಿ ಇಂದು ಮುಂಜಾನೆ ನಿಧನರಾಗಿದ್ದಾರೆ.
ಅವರು ತೋರಿಸಿದ ಪ್ರೀತಿ, ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರು ತಮ್ಮ ಇಡೀ ಜೀವನವನ್ನು ಸೇವೆಗಾಗಿ ಮುಡಿಪಾಗಿಟ್ಟು, ಸೇವೆ ಸಲ್ಲಿಸುವ ಮೂಲಕ ಹೇಗೆ ಜೀವನ ಸಾಗಿಸಬಹುದು ಎಂದು ನಮಗೆಲ್ಲ ಪ್ರೇರಣೆಯಾಗಿದ್ದರು. ಅವರ ಆತ್ಮಕ್ಕೆ ದೇವರು ಶಾಂತಿ ಕೊಡಲಿ, ಓಂ ಶಾಂತಿ ಎಂದು ಬರೆದು ಕೊಂಡಿದ್ದಾರೆ. ಚಂದ್ರಕಾಂತ ಗೋಯಲ್ ಅವರು ಮೂರು ಬಾರಿ ಮುಂಬೈನ ಮಾತುಂಗಾ ಕ್ಷೇತ್ರದ ಶಾಸಕಿಯಾಗಿದ್ದರು








