ಪಾಟ್ನಾ: ಅಪ್ರಾಪ್ತ ಬಾಲಕಿ ಮೇಲೆ 34 ವರ್ಷದ ರೈಲ್ವೇ ಸಿಬ್ಬಂದಿ ದೌರ್ಜನ್ಯ ಎಸಗಿರುವ ಘಟನೆ ಬಿಹಾರದ ಹಮ್ ಸಫರ್ ಎಕ್ಸ್ ಪ್ರೆಸ್ ನಲ್ಲಿ (Hamsafar Express) ನಡೆದಿದೆ.
11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಪಾಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿ ರೈಲ್ವೇ ಸಿಬ್ಬಂದಿಯನ್ನು ಪ್ರಶಾಂತ್ ಕುಮಾರ್ ಎನ್ನಲಾಗಿದೆ. ಘಟನೆಯ ನಂತರ ವಿಷಯ ಬೆಳಕಿಗೆ ಬರುತ್ತಿದ್ದಂತೆ ಪ್ರಯಾಣಿಕರು ಹಾಗೂ ಕುಟುಂಬದವರ ಹೊಡೆತಕ್ಕೆ ಸಾವನ್ನಪ್ಪಿದ್ದಾನೆ.
ಲಕ್ನೋ ಮತ್ತು ಕಾನ್ಪುರಗೆ ಪ್ರಯಾಣಿಸುತ್ತಿದ್ದ ಹಮ್ ಸಫರ್ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ತಾಯಿ ಹೊರಗೆ ಹೋಗಿದ್ದಾಗ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆನಂತರ ಬಾಲಕಿ ವಿಷಯ ಹೇಳಿದ್ದಾಳೆ. ಕೂಡಲೇ ಅಲ್ಲಿದ್ದ ಪ್ರಯಾಣಿಕರು ಹಾಗೂ ಕುಟುಂಬಸ್ಥರು ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಆದರೆ, ಜನರ ಹೊಡೆತಕ್ಕೆ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.








