RAIN in Haveri | ಹಾವೇರಿಯಲ್ಲಿ ಮತ್ತೆ ಮಳೆರಾಯನ ಅಬ್ಬರ
ಹಾವೇರಿ : ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಹಾವೇರಿ ಜಿಲ್ಲೆಯಲ್ಲಿ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ.
ಇಂದು ಬೆಳಗಿನಿಂದ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದ್ದರೇ ಕಳೆದ ಒಂದು ಗಂಟೆಗಳಿಂದ ರಾಣೆಬೇನ್ನೂರು, ಬ್ಯಾಡಗಿ, ಹಾವೇರಿ, ಸೇರಿದಂತೆ ವಿವಿಧಡೆ ಮಳೆರಾಯನ ಅಬ್ಬರ ಜೋರಾಗಿದೆ.
ಪದೇ ಪದೇ ಮಳೆಯಾಗುತ್ತಿರುವ ಕಾರಣ ರೈತರು ಸಂಕಷ್ಟಕ್ಕೀಡಾಗಿದ್ದರು.
ಬೆಳೆದು ನಿಂತ ಪೈರು ಕಟಾವು ಮಾಡುವ ವೇಳೆ ಮಳೆ ಸುರಿದಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಮುಸುಕಿನ ಜೋಳ, ಹತ್ತಿ, ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳು ಈ ಮಳೆಗೆ ಹಾನಿಯಾಗಿದೆ.