Rain – ಚಾಮರಾಜನಗರ : ನೀರಿನೊಳಗೆ ಮುಳುಗಿದ ಪೊಲೀಸ್ ಠಾಣೆ
ಚಾಮರಾಜನಗರ : ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯಾದ್ಯಂತ ಭಾರಿ ಮಳೆ ಮುಂದುವರೆದಿದೆ.
ನಿರಂತರ ಮಳೆಯಿಂದಾಗಿ ಜಿಲ್ಲೆಯಾದ್ಯಂತ ನಾನಾ ಅವಾಂತರಗಳು ಸೃಷ್ಟಿಯಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ.
ಆದ್ರೆ ಇದೀಗ ಪೊಲೀಸ್ ಠಾಣಗೆ ಮಳೆ ನೀರು ನುಗ್ಗಿದೆ.
ಹೌದು..!! ಕೊಳ್ಳೇಗಾಲ ತಾಲೂಕಿನ ಅಗರಮಾಂಬಳ್ಳಿ ಪೋಲೀಸ್ ಠಾಣೆಯು ಮಳೆ ನೀರಿನಲ್ಲಿ ಮುಳುಗಿರುವ ಘಟನೆ ನಡೆದಿದೆ.

ಕಳೆದ ಮೂರುದಿನದಿಂದ ಧಾರಾಕಾರಾವಾಗಿ ಸುರಿಯುತ್ತಿರುವ ಪರಿಣಾಮ ಪೊಲೀಸ್ ಠಾಣೆಗೆ ಮಳೆ ನೀರು ನುಗ್ಗಿದೆ.
ಠಾಣೆಯೊಳಗೆ ನೀರು ನುಗ್ಗಿ ಕೊಠಡಿಗಳು ಸಾಮಾಗ್ರಿಗಳು ಜಲಾವೃತಗೊಂಡು ಪೊಲೀಸರು ಪರದಾಡುವಂತಾಗಿದೆ.
ಇದಲ್ಲದೆ ಜಿಲ್ಲೆಯಲ್ಲಿ ಮಳೆಯಿಂದಾಗಿ ಸಾಕಷ್ಟು ಅನಾಹುತಗಳು ಸಂಭವಿಸಿದೆ.
ಅಪಾರ ಪ್ರಮಾಣ ಬೆಳೆ ನಾಶವಾಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.








