ಭಾರತ vs ದಕ್ಷಿಣ ಆಫ್ರಿಕಾ 2 ಟೆಸ್ಟ್ – ಪಂದ್ಯಕ್ಕೆ ಮಳೆ ಅಡ್ಡಿ ಸಂಭವ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್‌ನ ನಾಲ್ಕನೇ ದಿನದ ಆಟಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಬಿಸಿಸಿಐ ಟ್ವೀಟ್ ಮೂಲಕ ಈ ಮಾಹಿತಿ ನೀಡಿದೆ. ಜೋಹಾನ್ಸ್‌ಬರ್ಗ್ ಟೆಸ್ಟ್‌ನ ನಾಲ್ಕನೇ ದಿನಕ್ಕೆ ಮಳೆಯ ಮುನ್ಸೂಚನೆ ಇದೆ. ಗಂಟೆಗೆ 22-12 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಶೇ.70ರಷ್ಟು ಮಳೆಯಾಗುವ ಸಾಧ್ಯತೆ ಇದೆ.
ರೋಚಕ ಘಟ್ಟದಲ್ಲಿ ಟೆಸ್ಟ್
ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಜೋಹಾನ್ಸ್‌ಬರ್ಗ್ ಟೆಸ್ಟ್ ಇದೀಗ ರೋಚಕ ಟರ್ನಿಂಗ್ ಪಾಯಿಂಟ್ ತಲುಪಿದೆ. ಇಂದು ನಾಲ್ಕನೇ ದಿನದ ಆಟ. ಮೂರನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ. ಒಂದೆಡೆ ಆಫ್ರಿಕಾ ತಂಡ ಎರಡು ದಿನದಲ್ಲಿ 122 ರನ್ ಗಳಿಸಬೇಕಿದೆ. ಅದೇ ಸಮಯದಲ್ಲಿ ಟೀಂ ಇಂಡಿಯಾ ಗೆಲುವಿಗೆ 8 ವಿಕೆಟ್‌ಗಳ ಅಗತ್ಯವಿದೆ. ಇಲ್ಲಿಯವರೆಗೆ ಟೀಮ್ ಇಂಡಿಯಾ ಈ ಮೈದಾನದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಸೋತಿಲ್ಲ
ಬೌಲರ್‌ಗಳ ಮೇಲೆ ಜವಾಬ್ದಾರಿ
ಇಂದು ಟೀಂ ಇಂಡಿಯಾದ ಬೌಲರ್‌ಗಳು ಆರಂಭದಿಂದಲೂ ಆಫ್ರಿಕನ್ ಬ್ಯಾಟ್ಸ್‌ಮನ್‌ಗಳ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಬೇಕಿದೆ ಆಗ ಮಾತ್ರ ಗಗೆಲುವು ಸಾಧ್ಯ. ಭಾರತ ತಂಡವು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರ ಮೇಲೆ ಹೆಚ್ಚಿನ ಭರವಸೆಯನ್ನು ಹೊಂದಿದೆ. ಸ್ಪಿನ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್ ಕೈ ಹಿಡಿಯಲಿದ್ದಾರೆ. 2006ರ ನಂತರ ಜೋಹಾನ್ಸ್‌ಬರ್ಗ್‌ನಲ್ಲಿ ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೂ ಅಶ್ವಿನ್ ಪಾತ್ರರಾಗಿದ್ದಾರೆ.
ಜೋಹಾನ್ಸ್‌ಬರ್ಗ್ ಟೆಸ್ಟ್‌ನ ಮೂರನೇ ದಿನದಂದು ನಾಯಕ ಡೀನ್ ಎಲ್ಗರ್ 46 ರನ್ ಗಳಿಸಿ ಆಟ ಮುಂದುವರೆಸಲಿದ್ದಾರೆ. ಡೀನ್ ಎಲ್ಗರ್ ಬೇಗ ಔಟ್ ಮಾಡುವುದು ಭಾರತದ ಬೌಲರ್‌ಗಳಿಗೆ ದೊಡ್ಡ ಸವಾಲಾಗಿದೆ. ಎಲ್ಗರ್ ಬೇಗನೇ ಔಟಾಗದಿದ್ದರೆ ಆಫ್ರಿಕನ್ ತಂಡಕ್ಕೂ ಪಂದ್ಯ ಗೆಲ್ಲವು ಅವಕಾಶವಿದೆ.
ಜೋಹಾನ್ಸ್‌ಬರ್ಗ್ ಟೆಸ್ಟ್‌ನ ಮೂರನೇ ದಿನದಾಟ ಭಾರತಕ್ಕೆ ಉತ್ತಮ ಶುಭಾರಂಭ ಮಾಡಿತಾದರೂ ಆನಂತರ ವಿಕೆಟ್ ಉಳಿಸಿಕೊಳ್ಳುವಲ್ಲಿ ವಿಫಲವಾಹಿತು.. ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಸುಮಾರು 75 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿ ಪಂದ್ಯ ಕೈ ಜಾರದಂತೆ ನೋಡಿಕೊಂಡರು, ಆದರೆ 29 ರನ್ ಗಳಿಸುವಷ್ಟರಲ್ಲಿ ಭಾರತ ನಾಲ್ಕು ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಹನುಮ ವಿಹಾರಿ ಬ್ಯಾಟ್ಸ್‌ಮನ್‌ಗಳ ಜೊತೆಗೂಡಿ ಟೀಂ ಇಂಡಿಯಾವನ್ನು 266 ರನ್‌ಗಳಿಗೆ ಕೊಂಡೊಯ್ದರು. ಶಾರ್ದೂಲ್ ಠಾಕೂರ್ 28 ಮತ್ತು ರವಿಚಂದ್ರನ್ ಅಶ್ವಿನ್ 16 ರನ್ ಗಳಿಸಿದರು.