ಅಶ್ಲೀಲ ವಿಡಿಯೋ ನಿರ್ಮಾಣ – ಪೂನಂ , ಶರ್ಲಿನ್ ಗೆ ನಿರೀಕ್ಷಣಾ ಜಾಮೀನು..!
ಮುಂಬೈ: ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಪತಿ , ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋಗಳ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು, 14 ದಿನಗಳ ವರೆಗೂ ಮತ್ತೆ ಅವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.. ಈ ನಡುವೆ ಶಿಲ್ಪಾ ಶೆಟ್ಟಿ , ಮಾಡೆಲ್ ಗೆಹನಾ , ಶರ್ಲಿನ್ , ಪೂನಂ ಪಾಂಡೆಗೂ ಸಂಕಷ್ಟ ಎದುರಾಗಿದೆ..
ಹೌದು ಪ್ರಕರಣದ ಆರಂಭದಿಂದಲೂ ಪತ್ನಿ ಶಿಲ್ಪಾ ಶೆಟ್ಟಿಗೆ ಈ ಕೇಸ್ ನಲ್ಲಿ ಲಿಂಕ್ ಇದ್ಯಾ, ಅವರದ್ದೂ ಪಾಲಿದ್ಯಾ ಅನ್ನೋ ಚರ್ಚೆಗಳು ನಡೆಯುತ್ತಲೇ ಇದೆ.. ಆದ್ರೆ ಪೊಲೀಸರು ಆರಂಭದಲ್ಲಿ ಶಿಲ್ಪಾ ಶೆಟ್ಟಿ ಪಾಲ್ಗೊಂಡಿರುವ ಬಗ್ಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದಿದ್ರು.. ಆದ್ರೆ ಹೀಗಂತ ಶಿಲ್ಪಾ ಶೆಟ್ಟಿಗೆ ಇನ್ನೂ ರಿಲೀಫ್ ಸಿಕ್ಕಿಲ್ಲ.
ಹೌದು.. ಪ್ರಾಥಮಿಕ ತನಿಖೆ ವೇಳೆ ಶಿಲ್ಪಾ ಶೆಟ್ಟಿ ಪಾತ್ರ ಇರುವ ಬಗ್ಗೆ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಮುಂಬೈ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದರು. ಈ ಮೂಲಕ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿತ್ತು. ಆದ್ರೀಗ, ಶಿಲ್ಪಾ ಶೆಟ್ಟಿ ವಿಚಾರದಲ್ಲಿ ಈಗಲೇ ಕ್ಲೀನ್ ಚಿಟ್ ನೀಡಲು ಸಾಧ್ಯವಿಲ್ಲ ಎಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಕಾಮಿಡಿ ಕಿಲಾಡಿ ಖ್ಯಾತಿಯ ಗೋವಿಂದೇ ಗೌಡಗೆ ಅಪಘಾತ – ಪ್ರಾಣಾಪಾಯದಿಂದ ಪಾರು..!
ಇದೀಗ ಪೂನಂ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾಗೆ ಬಂಧನದ ಭೀತಿ ಎದುರಾಗಿದ್ದು, ಮುಂಬೈ ಸೆಷನ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಪೂನಂ ಮತ್ತು ಶೆರ್ಲಿನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ, ಸೆಪ್ಟೆಂಬರ್ 20 ರವರೆಗೆ ಪೂನಂ ಮತ್ತು ಶೆರ್ಲಿನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಿಲ್ಲ ಎಂದು ಆದೇಶಿಸಿದೆ. ಹಾಗಾಗಿ, ನಟಿಯರಿಬ್ಬರಿಗೂ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿದೆ.
ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟಿ ಶೆರ್ಲಿನ್ ಚೋಪ್ರಾಗೆ ಸೋಮವಾರ (ಜುಲೈ 26) ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಸಮನ್ಸ್ ಬರ್ತಿದ್ದಂತೆ ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಹೋಗಿದ್ದರು. ಶೆರ್ಲಿನ್ ಜೊತೆ ಪೂನಂ ಪಾಂಡೆ ಸಹ ನಿರೀಕ್ಷಣಾ ಜಾಮೀನು ಮೊರೆ ಹೋಗಿದ್ದರು.
ಬಳಿಕ ಶರ್ಲಿನ್ ಪರ ವಕೀಲರು, ತಮ್ಮ ಕಕ್ಷಿದಾರರಿಗೆ ಹೇಳಿಕೆಯನ್ನು ದಾಖಲಿಸಲು ಪೊಲೀಸರು ಸಮನ್ಸ್ ನೀಡಿದ್ದಾರೆ. ಈ ಹಿಂದೆ ಇದೇ ರೀತಿ ಸಮನ್ಸ್ ನೀಡಿರುವವರನ್ನು ಸೆಕ್ಷನ್ 41ಎ ಅಡಿ ನೋಟಿಸ್ ನೀಡದೆಯೇ ವಶಕ್ಕೆ ಪಡೆಯಲಾಗಿದೆ. ಎಫ್‌ಐಆರ್‌ನಲ್ಲಿ ಏನಿದೆ ಎನ್ನುವ ಮಾಹಿತಿ ಶೆರ್ಲಿನ್ ಅವರಿಗಿಲ್ಲ. ಅವರಿಗೆ ಎಫ್‌ಐಆರ್‌ನ ಪ್ರತಿಯನ್ನೂ ನೀಡಲಾಗಿಲ್ಲ. ಅವರ ವಿರುದ್ಧ ಇರುವ ಆರೋಪಗಳನ್ನು ವಿವರಿಸಲಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಈ ಪ್ರಕರಣದ ಸಂಬಂಧ ಜಾಮೀನು ರಹಿತ ಕೆಲವೊಂದು ಆರೋಪಗಳನ್ನು ತಮ್ಮ ಮೇಲೆ ಹೊರಿಸಬಹುದು ಎನ್ನುವ ಭೀತಿಯನ್ನು ಶೆರ್ಲಿನ್ ವ್ಯಕ್ತಪಡಿಸಿದ್ದಾರೆ ಎಂದು ಶೆರ್ಲಿನ್ ಪರ ವಕೀಲ ಸಿದ್ದೇಶ್ ಬೋರ್ಕರ್ ನ್ಯಾಯಾಲಯದ ಮುಂದೆ ವಿವರಿಸಿದ್ದಾರೆ. ಶೆರ್ಲಿನ್ ಮನವಿ ಸ್ವೀಕರಿಸಿದ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.








