ಅಶ್ಲೀಲ ವಿಡಿಯೋ ನಿರ್ಮಾಣ : ನ್ಯಾಯಾಂಗ ಬಂಧನದಲ್ಲಿ ಕುಂದ್ರಾ – ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ನಟಿ..!
ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಪತಿ , ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋಗಳ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು, 14 ದಿನಗಳ ವರೆಗೂ ಮತ್ತೆ ಅವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.. ಈ ನಡುವೆ ಪ್ರಕರಣದ ಆರಂಭದಿಂದಲೂ ರಾಜ್ ಕುಂದ್ರಾ ವಿರುದ್ಧ ಆರೋಪ ಮಾಡುತ್ತಲೇ ಬಂದಿರುವ ನಟಿ ಶರ್ಲಿನ್ ಗೂ ಬಂಧನ ಭೀತಿ ಎದುರಾಗಿದೆ.. ಹೀಗಾಗಿಯೇ ನಟಿ ಶೆರ್ಲಿನ್ ಚೋಪ್ರಾ ನಿರೀಕ್ಷಣಾ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
KGF-2 ದಾಖಲೆ ಪೀಸ್ ಪೀಸ್ ಮಾಡಿದ RRR – ಲಹರಿಗೆ ಭಾರೀ ಮತ್ತೊಮ್ಮೆ ಆಡಿಯೋ ಹಕ್ಕು ಮಾರಾಟ..!
ನೀಲಿ ಚಿತ್ರಗಳ ನಿರ್ಮಾಣದ ಆರೋಪ ಎದುರಿಸುತ್ತಿರುವ ರಾಜ್ ಕುಂದ್ರಾರ ಬ್ಯುಸಿನೆಸ್ ಡೀಲಿಂಗ್‌ಗಳ ಮೇಲೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಸಂಬಂಧ ಶೆರ್ಲಿನ್ ಗೆ ಸಮನ್ಸ್ ಕೊಟ್ಟಿದ್ದರು. ವಿಚಾರಣೆಗೆ ಎದುರಾಗುವ ಮುನ್ನ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸುವುದಾಗಿ ಶೆರ್ಲಿನ್ ಹೇಳಿಕೊಂಡಿದ್ದಾರೆ.
ಜುಲೈ 19ರಂದು ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾದ ಕುಂದ್ರಾ ನಡೆಸುತ್ತಿದ್ದಾರೆ ಎನ್ನಲಾದ ನೀಲಿ ಚಿತ್ರಗಳ ವ್ಯವಹಾರದ ಸಂಬಂಧ ಮಂಗಳವಾರ 11 ಗಂಟೆ ವೇಳೆಗೆ ತನಿಖೆಗೆ ಹಾಜರಾಗಲು ಶೆರ್ಲಿನ್‌ಗೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು.








