UP Elections 2022 : ಯುಪಿಯಲ್ಲಿ ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ : ರಾಜನಾಥ್ ಸಿಂಗ್
ನವದೆಹಲಿ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಮಾಜವಾದಿ ಪಕ್ಷವು “ಧರ್ಮ ಮತ್ತು ಜಾತಿ ಆಧಾರಿತ ರಾಜಕೀಯ” ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ.
ಪಂಚರಾಜ್ಯ ಚುನಾವಣೆ ಹಿನ್ನೆಲೆ , ಬಲ್ದೇವ್ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು
ಸಮಾಜವಾದಿ ಪಕ್ಷ ಧರ್ಮ ಮತ್ತು ಜಾತಿ ಆಧಾರಿತ ರಾಜಕಾರಣ ಮಾಡುತ್ತಿದೆ. ರಾಜಕೀಯ ಮಾಡಬೇಕಿರುವುದು ಜನರ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ. ರಾಜಕೀಯವು ಜಾತಿ ಅಥವಾ ಧರ್ಮದ ಆಧಾರದ ಮೇಲೆ ಇರಬಾರದು. ಸಮಾಜವಾದಿ ಪಕ್ಷ ಧರ್ಮ ಮತ್ತು ಜಾತಿ ಆಧಾರಿತ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ..
Top 10 news – ಈ ದಿನದ ಪ್ರಮುಖ ಸುದ್ದಿಗಳು…!!
ಅಲ್ಲದೇ ಬಿಜೆಪಿ ನುಡಿದಂತೆ ನಡೆದಿದೆ. ಎಂದು ಹೇಳಿದ ರಕ್ಷಣಾ ಸಚಿವರು, ಯುಪಿ ಅಭಿವೃದ್ಧಿಯಿಂದ ನವ ಭಾರತದ ಅಭಿವೃದ್ಧಿ ಸಾಧ್ಯ ಮತ್ತು ಯುಪಿಯಲ್ಲಿ ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರನ್ನು ಸ್ಮರಿಸಿದ ರಕ್ಷಣಾ ಸಚಿವರು, ದೀನದಯಾಳ್ ಉಪಾಧ್ಯಾಯ ಅವರು ನೀಡಿದ ನಿರ್ದೇಶನ ಮತ್ತು ದೂರದೃಷ್ಟಿಯ ಮೇಲೆ ಬಿಜೆಪಿ ಕೆಲಸ ಮಾಡುತ್ತಿದೆ ಎಂದರು..
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ ನಾಥ್ ಸಿಂಗ್ ಅವರು , ರಾಹುಲ್ ಗಾಂಧಿ ಅವರು ಗಾಲ್ವಾನ್ನಲ್ಲಿ ಕೇವಲ 3 ಚೀನೀ ಯೋಧರು ಮಾತ್ರ ಸಾವನಪ್ಪಿರೋದಾಗಿ ಹೇಳಿದರು. ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಆಸ್ಟ್ರೇಲಿಯಾ ಮೂಲದ ಪತ್ರಿಕೆಯ ಪ್ರಕಾರ, 38-50 ಚೀನೀ ಸೈನಿಕರು ಸಾವನಪ್ಪಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ…
ಅಲ್ಲದೇ ಭಾರತದ ಗಡಿಗಳು ಸುರಕ್ಷಿತವಾಗಿವೆ ಎಂದು ಪ್ರತಿಪಾದಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.









