ನಮ್ಮ ದೇಶದ ರಕ್ಷಣೆಗಾಗಿ ಭಯೋತ್ಪಾದಕ ದೇಶದ ನೆಲಕ್ಕೆ ನುಗ್ಗಿ ಹೊಡೆಯುತ್ತೇವೆ – ರಾಜನಾಥ್ ಸಿಂಗ್
ನವದೆಹಲಿ : ನಮ್ಮ ದೇಶದ ರಕ್ಷಣೆಗಾಗಿ ಅಗತ್ಯ ಬಿದ್ದರೆ ಭಯೋತ್ಪಾದಕ ದೇಶದ ನೆಲಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ತೊಡೆತಟ್ಟಿದ್ದಾರೆ.. ಹೌದು ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು , ಭಾರತದ ವಿರುದ್ಧ 2 ಯುದ್ಧಗಳಲ್ಲಿ ಸೋತು ಸುಣ್ಣವಾಗಿರುವ ದೇಶ ( ಪಾಕಿಸ್ತಾನ) ನಮ್ಮ ವಿರುದ್ಧ ಇದೀಗ ಛಾಯಾ ಸಮರ ಆರಂಭಿಸಿದೆ.
ಆ ದೇಶದ ರಾಜ್ಯ ನೀತಿಯ ಅವಿಭಾಜ್ಯ ಅಂಗವೇ ಭಯೋತ್ಪಾದನೆಯಾಗಿದೆ.. ಅದು ಉಗ್ರರಿಗೆ ಧನಸಹಾಯ ಮಾಡುತ್ತೆ, ಶಸ್ತ್ರಾಸ್ತ್ರ ಕೊಟ್ಟ ಉಗ್ರರಿಗೆ ತರಬೇತಿ ನೀಡಿ ಭಾರತದ ವಿರುದ್ಧ ಸಂಚು ರೂಪಿಸುತ್ತಿದೆ ಎಂದಿದ್ದಾರೆ. ಅಲ್ಲದೇ ಭಾರತ ಕೇವಲ ತನ್ನ ನೆಲದಲ್ಲಿ ಮಾತ್ರ ಭಯೋತ್ಪಾದನೆಯನ್ನ ಮಟ್ಟ ಹಾಕಲ್ಲ. ಅವಶ್ಯಕತೆ ಬಿದ್ದರೆ ಪಾಕಿಸ್ತಾನದ ನೆಲದಲ್ಲಿ ಹೋಗಿ ಕಾರ್ಯಾಚರಣೆ ನಡೆಸಿ ಉಗ್ರರನ್ನ ಹೊಡೆದುರುಳಿಸುತ್ತೇವೆ ಎಂದು ಪಾಕ್ ಗೆ ಎಚ್ಚರಿಕೆ ನೀಡಿದ್ದಾರೆ.
ತಾಲಿಬಾನ್ ನಲ್ಲಿ ಮಹಿಳೆಯರಿಗೆ ನರಕ – ಟಿವಿ – ರೇಡಿಯೋಗಳಲ್ಲೂ ಮಹಿಳೆಯರ ಧ್ವನಿ ಕೇಳುವಂತಿಲ್ಲ..!








