‘ತಲೈವಾ’ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಾಶಸ್ತಿ..!
ಮುಂಬೈ: ಭಾರತೀಯ ಸಿನಿಮಾರಂಗದ ಮೇರು ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ದೇಶದ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದಿದೆ.
ಚಿತ್ರರಂಗದಲ್ಲಿ ಅನೇಕ ಬಾಷೆಗಳಲ್ಲಿ ನಟಿಸಿ ಸಾಧನೆ ಮಾಡಿರುವ ‘ಕಬಾಲಿ’ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದರಿಂದಾಗಿ ರಜನಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರ ಪ್ರತಿವರ್ಷ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ನೀಡುತ್ತದೆ. ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರ ಜನ್ಮ ಶತಾಬ್ದಿಯ ವರ್ಷ 1969ರಿಂದ ಈ ಪ್ರಶಸ್ತಿಯನ್ನು ಚಿತ್ರರಗಂದ ಮಹಾನ್ ಸಾಧಕರಿಗೆ ಕೊಟ್ಟು ಗೌರವಿಸಲಾಗುತ್ತಿದೆ.
51ನೇ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಗೆ ರಜಿನಿಕಾಂತ್ ಆಯ್ಕೆಯಾಗಿದ್ದಾರೆ. ನಟನಾಗಿ, ನಿರ್ಮಾಪಕನಾಗಿ ಮತ್ತು ಚಿತ್ರಕಥೆಗಾರನಾಗಿ ತಲೈವಾ ಗುರುತಿಸಿಕೊಂಡಿದ್ದಾರೆ. ಅವರದ್ದೇ ಆದ ವಿಭಿನ್ನ ಸ್ಟೈಲ್ ನಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.
ಈ ಪ್ರಶಸ್ತಿಯಲ್ಲಿ ಸ್ವರ್ಣ ಕಮಲ ಪದಕ ಹಾಗೂ 10 ಲಕ್ಷ ರೂ ನಗದು ಬಹುಮಾನ ಒಳಗೊಂಡಿರುತ್ತದೆ. ಕರ್ನಾಟಕ ರತ್ನ, ವರನಟ ಡಾ. ರಾಜಕುಮಾರ್ ಸೇರಿದಂತೆ ಈವರೆಗೆ 50 ಮಂದಿ ಮೇರು ನಟರು, ಗಾಯಕರು, ನಿರ್ದೇಶಕರು ಈ ಅತ್ಯುಚ್ಚ ಪ್ರಶಸ್ತಿಗೆ ಬಾಜನರಾಗಿದ್ದಾರೆ. ರಾಜಕುಮಾರ್ , ಲತಾ ಮಂಗೇಶ್ಕರ್, ರಾಜ್ ಕಪೂರ್, ಅಮಿತಾಭ್ ಬಚ್ಚನ್ ಸೇರಿದಂತೆ ಅನೇಕ ಮೇರು ನಟರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭ್ಯವಾಗಿದೆ.
ಬರೆದಿಟ್ಟುಕೊಳ್ಳಿ ಯುವರತ್ನ ಸಿನಿಮಾ ಪಕ್ಕಾ 100 ಡೇಸ್..! ಈಗಿನ ಜೆನರೇಶನ್ ನ ಯುವಕರು ನೋಡ್ಲೇಬೇಕಾದ ಸಿನಿಮಾ..!
ತಮ್ಮ ಆಕ್ಷನ್-ಸಾಹಸ ಚಿತ್ರ ‘ರಾಮ ಸೇತು’ ವಿನ ಶೂಟಿಂಗ್ ಪ್ರಾರಂಭಿಸಿದ ಅಕ್ಷಯ್ ಕುಮಾರ್
RRR ನಲ್ಲಿ ಹೇಗಿರಲಿದೆ ‘ಸಿಂಗಂ’ ಅವತಾರ – ಏ. 2ಕ್ಕೆ ಅಜಯ್ ಲುಕ್ ರಿಲೀಸ್..!








