ಜೀವಜಲಕ್ಕಾಗಿ ಪರಿತಪಿಸಿ ಪ್ರಾಣಬಿಟ್ಟ 5 ವರ್ಷದ ಪುಟ್ಟ ಬಾಲಕಿ..!
ರಾಜಸ್ಥಾನ : ಜೀವಜಲಕ್ಕಾಗಿ ಪರಿತಪಿಸಿ 5 ವರ್ಷದ ಪುಟ್ಟ ಬಾಲಕಿ ಜೀವತೆತ್ತಿರುವ ಘಟನೆ ರಾಜಸ್ತಾನದ ಜಲೋರ್ ಜಿಲ್ಲೆಯ ರಾಣಿವಾರಾದಲ್ಲಿ ನಡೆದಿದೆ.. 5 ವರ್ಷದ ಬಾಲಕಿಯು ಬಾಯಾರಿಕೆಯಿಂದ ಸಾವನ್ನಪ್ಪಿದ್ದಾಳೆ. ಆಕೆಯ ಅಜ್ಜಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.
ರೋಡಾ ಗ್ರಾಮದಲ್ಲಿ ಕುಟುಂಬ ಸದಸ್ಯರನ್ನು ನೋಡಲು ಸುಖಿ (60) ಮತ್ತು ಅವರ ಮೊಮ್ಮಗಳು ಮಂಜು (5) ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ದಾರಿಯ ನಡುವೆ ಬಾಯಾರಿಕೆ ಹೆಚ್ಚಾಗಿದ್ದು, ಸ್ಥಳದಲ್ಲಿ ಎಲ್ಲೂ ಜನವಸತಿ ಇಲ್ಲದೇ ಕುಡಿಯಲು ನೀರು ಸಿಗದೇ ಪರಿತಪಿಸಿದ್ದಾರೆ.. ಹೀಗೆ ಬಾಯಾರಿಕೆಯಿಂದ ಬಾಲಕಿ ಮೃತಪಟ್ಟಿದ್ರೆ ಅಜ್ಜಿ ಅಸ್ವಸ್ಥಗೊಂಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.