ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಆಪ್ತರಿಗೆ ಐಟಿ ಶಾಕ್ : 12 ಕೋಟಿ ವಶ
ನವದೆಹಲಿ : ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ನಡುವೆ ಸಿಎಂ ಅಶೋಕ್ ಗೆಹ್ಲೋಟ್ ಗೆ ಐಟಿ ಶಾಕ್ ನೀಡಿದೆ. ಗೆಹ್ಲೋಟ್ ಆಪ್ತರ ಮನೆಗಳ ಮೇಲೆ 200ಕ್ಕೂ ಹೆಚ್ಚು ಐಟಿ ಅಧಿಕರಿಗಳು ವಿವಿಧ ತಂಡಗಳಾಗಿ ರೇಡ್ ಮಾಡಿದ್ದಾರೆ. ದಾಳಿ ವೇಳೆ 12 ಕೋಟಿ ರೂ ಮೊತ್ತದ ನಗದು ಹಣ ಹಾಗೂ ದಾಖಲೆಗಳಿಲ್ಲದ 1.7 ಕೋಟಿ ರೂ ಮೌಲ್ಯದ ಒಡವೆ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ತೆರಿಗೆ ವಂಚನೆ ಆರೋಪದ ಮೇರೆಗೆ ಜುಲೈ 13 ರಂದು ರಾಜಸ್ಥಾನ ಮೂಲದ ಮೂರು ಸಂಸ್ಥೆಗಳಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರೇಡ್ ಆದ ಮೂರು ಕಂಪನಿಗಳಲ್ಲಿ ಎರಡು ಕಂಪನಿಗಳು ಸಿಎಂ ಅಶೋಕ್ ಗೆಹ್ಲೋಟ್ ಅವರ ಆಪ್ತರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.
ಅಶೋಕ್ ಗೆಹ್ಲೋಟ್ ಅವರ ಮಗನ ವ್ಯವಹಾರ ಪಾಲುದಾರ ರತನ್ ಕಾಂತ್ ಶರ್ಮಾ ಅವರ ಮೇಲೂ ಐಟಿ ದಾಳಿ ನಡೆದಿದ್ದು, ಅವರ ಲಾಕರ್ ನಲ್ಲಿ 5 ಕೋಟಿ ರೂ ನಗದು ಹಣ ಸಿಕ್ಕಿದೆ. ಈ ರೇಡ್ ನಿಂದ ಪತ್ತೆಯಾದ ಹಣವನ್ನ ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿತ್ತೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಇದು ಒಂದು ಕಡೆಯಾದರೇ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ ಶಾಸಕರು ಬಂಡಾಯದ ಬಾವುಟ ಹಾರಿಸಿರುವ ಹೊತ್ತಲ್ಲೇ ಐಟಿ ದಾಳಿ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಆದರೆ, ತೆರಿಗೆ ಇಲಾಖೆಯ ನೀತಿ ರೂಪಕ ಸಂಸ್ಥೆಯಾದ ಸಿಬಿಡಿಟಿ ಈ ಆರೋಪಗಳನ್ನ ತಳ್ಳಿಹಾಕಿದೆ.








