ರಾಜಸ್ಥಾನ | ಹೆಣ್ಣುಮಕ್ಕಳಿಂದಲೇ ತಾತನ ಅಂತ್ಯಸಂಸ್ಕಾರ!
ರಾಜಸ್ಥಾನ : ರಾಜಸ್ಥಾನದ ದೌಸಾ ಜಿಲ್ಲೆಯ ಬಂಡಿಕುಯಿ ಗ್ರಾಮದಲ್ಲಿ ತಾತನ ಮಡಿಲಲ್ಲಿ ಆಡಿ ಬೆಳೆದ ಹೆಣ್ಣುಮಕ್ಕಳು ಇಂದು ತಾತನ ಅಂತ್ಯಸಂಸ್ಕಾರವನ್ನು ತಾವೇ ನೆರವೇರಿಸಿದ್ದಾರೆ.
95 ವರ್ಷದ ಬಂಡಿಕುಯಿ ನಿವಾಸಿ ಬಾಲುರಾಮ್ ಸೈನಿ ಅಸುನೀಗಿದ್ದು, ಕೆಲ ಕಾರಣಾಂತರಗಳಿಂದ ದೂರವಾಗಿದ್ದ ಮಗ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಪೂರೈಸಲು ಬಂದಿಲ್ಲ.
ಈ ವೇಳೆ ತಮ್ಮ ಅಜ್ಜನ ಸಾವಿಗೆ ಬಂದ 6 ಮೊಮ್ಮಕ್ಕಳು ತಮ್ಮ ಅಜ್ಜನ ಅಂತಿಮ ವಿಧಿಗಳನ್ನು ನೆರವೇರಿಸಲು ಮುಂದಾಗಿದ್ದಾರೆ..
ತಾತನ ಆರೈಕೆಯಲ್ಲಿ ಬೆಳೆದ ಮೊಮ್ಮಕ್ಕಳೇ ತಾತನ ಶರೀರವನ್ನು ಹೆಗಲು ಕೊಟ್ಟಿದ್ದಾರೆ. ಇದಲ್ಲದೆ ಮೃತ ಅಜ್ಜನ ದೊಡ್ಡ ಮೊಮ್ಮಗಳಾದ ಮಂಜು ದೇವಿ, ತಲೆ ಬೋಳಿಸಿಕೊಂಡಿದ್ದಾರೆ.
ಆ ಮೂಲಕ ಗಂಡುಮಗನೇ ಪಿತೃ ಅಂತ್ಯಸಂಸ್ಕಾರ ನಡೆಸಬೇಕೆಂಬ ಹಳೆಯ ಸಾಂಪ್ರದಾಯಕ್ಕೆ ಸೆಡ್ಡು ಹೊಡೆದು ಎಲ್ಲಾ ವಿಧಿ-ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel