ಕೊರೊನಾಗೆ ತಂದೆ ಬಲಿ – ದುಃಖ ತಾಳಲಾರದೇ ಚಿತೆಗೆ ಹಾರಿದ ಮಗಳು
ರಾಜಸ್ಥಾನ : ದೇಶದಲ್ಲಿ ಕೊರೊನಾ 2ನೇ ಅಲೆ , ತಿಭಯನಾಕವಾಗಿದ್ದುಸಾವಿರಾರು ಜನ ನಿತ್ಯ ಸಾಯುತ್ತಿದ್ದಾರೆ. ಎಲ್ಲಿ ನೋಡಿದ್ರು ಸಾವು , ನೋವು, ಮೃತರ ಕುಟುಂಬಸ್ಥರ ಆಕ್ರದಂನ… ಮುಗಿಲು ಮುಟ್ಟಿದೆ. ರಾಜಸ್ಥಾನದಲ್ಲೊಂದು ಮನಕಲಕುವ ಘಟನೆ ನಡೆದಿದೆ. ತಂದೆ ಕೊರೊನಾಗೆ ಬಲಿಯಾದ ನೋವು ತಾಳಲಾರದೇ ಮಗಳು ಅಪ್ಪನ ಚಿತೆಗೆ ಹಾರಿದ್ದಾಳೆ.
ರಾಜಸ್ಥಾನದ ಬಾರ್ಮರ್ ಎಂಬಲ್ಲಿ ಈ ಘಟನೆ ನಡೆದಿದೆ. ಚಂದ್ರಕಲಾ ಎಂಬ ಯುವತಿ ತಂದೆಯ ಸಾವಿನ ದುಃಖ ಸಹಿಸಲಾಗದೇ ತಕ್ಷಣ ತಂದೆಯ ಚಿತೆಗೆ ಜಿಗಿದಿದ್ದಾಳೆ. ಬಳಿಕ ಸ್ಥಳದಲ್ಲಿದ್ದವರು ಹೇಗೋ ಆಕೆಯನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ಧಾರೆ. ಆದ್ರೆ ಆಕೆಯ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ. 73 ವರ್ಷದ ದಾಮಾದರದಾಸ್ ಎನ್ನುವವರು ಸೋಂಕಿನಿಂದ ಮೃತಪಟ್ಟಿದ್ದರು. ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯುತ್ತಿತ್ತು. ಅಲ್ಲಿಗೆ ಬಂದ ಅವರ ಮಗಳು ಚಂದ್ರಕಲಾ ಏಕಾಏಕಿ ಚಿತೆಗೆ ಹಾರಿದ್ದಳು. ಪರಿಣಾಮ ಆಕೆಯ ದೇಹ ಶೇಕಡ 70 ರಷ್ಟು ಸುಟ್ಟುಹೋಗಿದೆ.
ದೇಶದಲ್ಲಿ ಕೊರೊನಾಗೆ ಲೆಕ್ಕವಿಲ್ಲದಷ್ಟು ಮಂದಿ ಬಲಿಯಾಗ್ತಿದ್ದಾರೆ. ಅದೆಷ್ಟೋ ಜನರು ತಮ್ಮವರನ್ನ ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸಿನಿ ತಾರಯರು ಸಹ ತಮ್ಮರನ್ನ ಕಳೆದುಕೊಂಡು ನೋವನ್ನ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ತಿದ್ದಾರೆ. ಸೋಂಕಿತರು ಬೆಡ್ ಸಿಗದೇ ಆಕ್ಸಿಜನ್ ಕೊರತೆಯಿಂದ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಗೆ ಬಂದು ದೇಶ ತಲುಪಿದೆ. ಅಂತಹದ್ರಲ್ಲಿ ತೀರಾ ಮನಕಲಲಕುಂತಹ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇದೆ.. ಅಂತಹ ಘಟನೆಗಳಿಗೆ ರಾಜಸ್ಥಾನದಲ್ಲಿ ನಡೆದಿರುವ ೀ ಘಟನೆಯೂ ಸಾಕ್ಷಿ.