IPL 2022 | ಆರ್ ಸಿಬಿ ತಂಡಕ್ಕೆ ಆಘಾತ..!!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿದೆ.
ಪಂಜಾಬ್ ವಿರುದ್ಧದ ಮೊದಲ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡುವೆಯೂ ಬೆಂಗಳೂರು ತಂಡ ಸೋಲುಂಡಿತ್ತು.
ಇದಾದ ಬಳಿಕ ಸಾಂಘೀಕ ಹೋರಾಟ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿದೆ.
ಈ ಗೆಲುವಿನ ಜೋಷ್ ನಲ್ಲಿಯೇ ಬೆಂಗಳೂರು ತಂಡ ರಾಯಲ್ಸ್ ವಿರುದ್ಧದ ಹೋರಾಟಕ್ಕೆ ಸಿದ್ಧವಾಗುತ್ತಿದೆ.
ಆದ್ರೆ ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಯುವ ಆಟಗಾರ ಲವ ನೀತ್ ಸಿಸೋಡಿಯಾ ತಂಡದಿಂದ ದೂರವಾಗಿದ್ದಾರೆ.
ಸಿಸೋಡಿಯಾ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಅವರ ಬದಲಿಗೆ ಮಧ್ಯಪ್ರದೇಶದ ಯುವ ಬ್ಯಾಟರ್ ರಜತ್ ಪಾಟಿದಾರ್ ಗೆ ಬೆಂಗಳೂರು ತಂಡ ಮಣೆ ಹಾಕಿದೆ.
ರಜತ್ ಪಾಟಿದಾರ್ ಕಳೆದ ವರ್ಷ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು.
ಕಳೆದ ಬಾರಿ ತಂಡದಲ್ಲಿ ಸ್ಥಾನ ಪಡೆದ್ರೂ ಉತ್ತಮ ಪ್ರದರ್ಶನ ನೀಡುವಲ್ಲಿ ಪಾಟಿಧಾರ್ ವಿಫಲರಾಗಿದ್ದರು. ಹೀಗಾಗಿ ಆರ್ ಸಿಬಿ ಫ್ರಾಂಚೈಸಿ ಅವರನ್ನು ರಿಟೈನ್ಡ್ ಮಾಡಿಕೊಳ್ಳಲಿಲ್ಲ.
ಜೊತೆಗೆ ಮೆಗಾ ಹಜಾರಿನಲ್ಲಿಯೂ ಪಟಿಧಾರ್ ಕಡೆ ಯಾವುದೇ ಫ್ರಾಂಚೈಸಿ ಮುಖಮಾಡಿರಲಿಲ್ಲ. ಆದ್ರೆ ಇದೀಗ ಬೆಂಗಳೂರು ಫ್ರಾಂಚೈಸಿಯೇ ಅವರನ್ನ ತಂಡಕ್ಕೆ ಕರೆತಂದಿದೆ.
ಇನ್ನು ದೇಶಿಯ ಟೂರ್ನಿಯಲ್ಲಿ ಪಟಿಧಾರ್ 31 ಟಿ 20 ಪಂದ್ಯಗಳನ್ನಾಡಿದ್ದು, 861 ರನ್ ಗಳಿಸಿದ್ದಾರೆ. ಕಳೆದ ವರ್ಷ ಆರ್ ಸಿಬಿ ಪರ ಒಂದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.
ಅಂದಹಾಗೆ ಸದ್ಯ ಗಾಯಗೊಂಡಿರುವ ಲವ್ ನಿತ್ ಸಿಸೋಡಿಯಾ ಮೂಲತಃ ಕರ್ನಾಟಕದ ಆಟಗಾರರಾಗಿದ್ದಾರೆ. ಅವರು ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.
ಹೀಗಾಗಿ ಅವರನ್ನ ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ 20 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು. ಅಲ್ಲದೇ ಅವರನ್ನ ಪ್ಲೇಯಿಂಗ್ ಇಲೆವೆನ್ ನಲ್ಲಿ ಆಡಿಸುವ ಸಾಧ್ಯತೆಗಳು ಕೂಡ ಇದ್ದವು. ಆದ್ರೆ ಇದೀಗ ಗಾಯಗೊಂಡು ಟೂರ್ನಿಯಿಂದಲೇ ಹೊರ ನಡೆದಿದ್ದಾರೆ. rajat-patidar-replaces-injured-luvnith-sisodia-rcb









