ರಾಜಭವನ ಚಲೋ | ಮತ್ತೆ ಭುಗಿಲೆದ್ದ ರೈತರ ಆಕ್ರೋಶ
ಬೆಂಗಳೂರು : ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಅನ್ನದಾತರು ಸಮರ ಸಾರಿದ್ದಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯ ರೈತರಿಂದ ಇಂದು ರಾಜಭವನ ಚಲೋ ಚಳವಳಿ ಆರಂಭಿಸಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಮೌರ್ಯ ಸರ್ಕಲ್, ಫ್ರೀಡಂಪಾರ್ಕ್, ಮಹಾರಾಣಿ ಕಾಲೇಜು, ಚಾಲುಕ್ಯ ಸರ್ಕಲ್ ಮಾರ್ಗವಾಗಿ ರೈತರು ರಾಜಭವನ ತಲುಪಿದ್ದು, ಯಾರ್ಲಿಯಲ್ಲಿ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ್, ಸೇರಿದಂತೆ ನೂರಾರು ರೈತರು ಭಾಗಿಯಾಗಿದ್ದಾರೆ.
ರಾಜಭವನ ತಲುಪಿದ ನಂತರ ಅಲ್ಲಿ ಪ್ರತಿಭಟನೆಗೆ ಮುಂದಾದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದರಿಂದ ಆಕ್ರೋಶಗೊಂಡ ರೈತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಸಂಯುಕ್ತ ಹೋರಾಟ ಕರ್ನಾಟಕ ಸಂಘದ ವತಿಯಿಂದ ಪ್ರತಿಭಟನೆ ನಡೆಯುತ್ತಿದೆ.