ಬಿಗ್ ಬಾಸ್ : ದೊಡ್ಮನೆಯಿಂದ ರಾಜೀವ್ ಔಟ್ RAJEEV
ಬಿಗ್ ಬಾಸ್ ಸೀಸನ್ 8ರಿಂದ ರಾಜೀವ್ ಹೊರ ನಡೆದಿದ್ದಾರೆ. ಇದು ಒಂದು ರೀತಿಯಾಗಿ ಅಚ್ಚರಿಯ ಎಲಿಮಿನೇಶನ್ ಪ್ರಕ್ರಿಯೆ ಆಗಿದ್ದು,
ಕಳೆದ ವಾರವಷ್ಟೇ ಗೋಲ್ಡನ್ ಪಾಸ್ ಪಡೆದುಕೊಂಡಿದ್ದ ರಾಜೀವ್, ಈ ವಾರ ಅತಿ ಕಡಿಮೆ ಮತಗಳನ್ನು ಪಡೆಯುವ ಮೂಲಕ ಎಲಿಮಿನೇಟ್ ಆಗಿದ್ದಾರೆ.
ರಾಜೀವ್ ಬಿಗ್ ಬಾಸ್ ಮನೆಯಲ್ಲಿ 54 ದಿನಗಳನ್ನು ಕಳೆದಿದ್ದು, ಮನೆಯ ಸದಸ್ಯರಲ್ಲಿ ಕೆಲವೇ ಕೆಲವು ಮಂದಿಯ ಜೊತೆ ಕಾಲ ಕಳೆಯುತ್ತಿದ್ದರು.
ಆಟಗಳಲ್ಲಿ ಮಾತ್ರ ಸಾಮಥ್ರ್ಯ ತೋರಿಸುತ್ತಿದ್ದರು. ಅವರು ನೇರವಾಗಿ ನಾಮಿನೇಟ್ ಮಾಡುವ ಮೂಲಕ ಎಲಿಮಿನೇಶನ್ ಲಿಸ್ಟ್ ನಲ್ಲಿದ್ದರು.
ಈ ವೇಳೆ ಬಿಗ್ ಬಾಸ್, ಗೋಲ್ಡನ್ ಪಾಸ್ ಬಳಸುತ್ತೀರಾ ಎಂದು ರಾಜೀವ್ ಅವರನ್ನ ಕೇಳಿದ್ದರು. ಆದೆರ ರಾಜೀವ್ ಆತ್ಮವಿಶ್ವಾಸದಿಂದ ಇಲ್ಲ ಎಂದಿದ್ದರು.
ಆದರೆ, ಅದೇ ಅವರಿಗೆ ಮುಳುವಾಗಿದ್ದು, ಇದೀಗ ಬಿಗ್ ಬಾಸ್ ಸೀಸನ್ 8ರಿಂದ ಎಲಿಮಿನೇಟ್ ಆಗಿದ್ದಾರೆ.