ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅಣ್ಣಾತ್ತೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. rajinikanth saaksha tv
ಅಣ್ಣಾತ್ತೆ ಚಿತ್ರದಲ್ಲಿ ರಜನಿಕಾಂತ್ ವಿಭಿನ್ನ ಗೆಟಪ್, ಮಾಸ್ ಲುಕ್ ಹಾಗೂ ಡಿಫರೆಂಟ್ ಸ್ಟೆöÊಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಣದಲ್ಲಿ ಧೂಳು ಎಬ್ಬಿಸಿರುವ ಅಣ್ಣಾತ್ತೆ ಚಿತ್ರದ ಟೀಸರ್ ನೋಡಿ ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿಬಿಟ್ಟಿದ್ದಾರೆ.
೨೦೨೦ರಲ್ಲಿ ತೆರೆ ಕಂಡ ದರ್ಬಾರು ಚಿತ್ರದ ನಂತರ ರಜನಿಕಾಂತ್ ಅವರು ಅಣ್ಣಾತ್ತೆ ಚಿತ್ರಕ್ಕೆ ಸಹಿ ಹಾಕಿದ್ದರು.
ಆದ್ರೆ ಈ ಚಿತ್ರದ ಶೂಟಿಂಗ್ ವೇಳೆ ಸಾಕಷ್ಟು ವಿಘ್ನಗಳು ಎದುರಾಗಿತ್ತು. ಕೊರೊನಾ, ಲಾಕ್ ಡೌನ್ ಅಂತ ಮೂರು ಬಾರಿ
ಚಿತ್ರದ ಶೂಟಿಂಗ್ ಅನ್ನು ಕೂಡ ಮುಂದೂಡಲಾಗಿತ್ತು. ಅಲ್ಲದೆ ರಜನಿ ಕಾಂತ್ ಕೂಡ ಕೊರೋನಾ ಸೋಂಕಿಗೆ ತುತ್ತಾಗಿದ್ದರು.
ಅಣ್ಣಾತ್ತೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರ ತಂಡ ಈಗಾಗಲೇ ಘೋಷಣೆ ಮಾಡಿದೆ. ನವೆಂಬರ್ ೪ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಸನ್ ಪಿಕ್ಚರ್ಸ್ ನ ಕಲಾನಿಧಿ ಮಾರನ್ ಅವರು ನಿರ್ಮಾಣ ಮಾಡುತ್ತಿದ್ದಾರೆ.
ಶಿವ ಅವರ ನಿದೇರ್ಶನವಿದೆ. ಕೀರ್ತಿ ಸುರೇಶ್, ನಯನ ತಾರ, ಖುಷ್ಬು, ಮೀನಾ ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಒಟ್ಟಿನಲ್ಲಿ ರಜನಿ ಕಾಂತ್ ಅಭಿನಯದ ಅಣ್ಣಾತ್ತೆ ಚಿತ್ರ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.