ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ನೇಮಕ…
ಹಿರಿಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನಾಗಿ (ಸಿಇಸಿ) ನೇಮಕ ಮಾಡಲಾಗಿದೆ. ಮೇ 15 ರಂದು ಅಧಿಕಾರವನ್ನ ವಹಿಸಿಕೊಳ್ಳಲಿದ್ದಾರೆ. ವಹಿಸಲಿದ್ದಾರೆ.
ಕಾನೂನು ಸಚಿವಾಲಯದ ಪ್ರಕಟಣೆಯ ಪ್ರಕಾರ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರಾಜೀವ್ ಕುಮಾರ್ ಅವರನ್ನ ಸಿಇಸಿ ಆಗಿ ನೇಮಿಸಿದ್ದಾರೆ. ಮೇ 14 ರಂದು ಮುಖ್ಯ ಚುನಾವಣಾ ಆಯುಕ್ತರಾಗಿ ಸುಶೀಲ್ ಚಂದ್ರ ಅವರು ರಾಜಿನಾಮೆ ನೀಡಿದ ಬಳಿಕ ಹುದ್ದೆಯ ಉಸ್ತುವಾರಿ ವಹಿಸಲಿದ್ದಾರೆ.
“ಸಂವಿಧಾನದ 324 ನೇ ವಿಧಿಯ ಷರತ್ತು (2) ರ ಅನುಸಾರವಾಗಿ, ರಾಷ್ಟ್ರಪತಿಗಳು ರಾಜೀವ್ ಕುಮಾರ್ ಅವರನ್ನು ಮೇ 15, 2022 ರಿಂದ ಜಾರಿಗೆ ಬರುವಂತೆ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲು ಸಂತೋಷಪಟ್ಟಿದ್ದಾರೆ. ರಾಜೀವ್ ಕುಮಾರ್ ಅವರಿಗೆ ನನ್ನ ಶುಭಾಶಯಗಳು” ಎಂದು ಕೇಂದ್ರ ಕಾನೂನು ಸಚಿವರಾದ ಕಿರೆನ್ ರಿಜಿಜು ಅವರು ಟ್ವೀಟ್ ಮಾಡಿದ್ದಾರೆ.
ಬಿಹಾರ/ಜಾರ್ಖಂಡ್ ಕೇಡರ್ ನ 1984 ರ ಬ್ಯಾಚ್ನ ಭಾರತೀಯ ಆಡಳಿತ ಸೇವೆಯ ಅಧಿಕಾರಿ ರಾಜೀವ್ ಕುಮಾರ್ ಅವರು ಫೆಬ್ರವರಿ 2020 ರಲ್ಲಿ ಐಎಎಸ್ನಿಂದ ಬಡ್ತಿ ಪಡೆದಿದ್ದರು. ಸೆಪ್ಟೆಂಬರ್ 1, 2020 ರಂದು ಅವರು ಚುನಾವಣಾ ಆಯೋಗದ (ಇಸಿಐ) ಚುನಾವಣಾ ಆಯುಕ್ತರಾಗಿ ಉಸ್ತುವಾರಿ ವಹಿಸಿಕೊಂಡರು.
ಸೆಂಟ್ರಲ್ ಬೋರ್ಡ್ ಆಫ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ನಿರ್ದೇಶಕರಾಗಿದ್ದ ಕುಮಾರ್ ಅವರು ಸುಮಾರು ನಾಲ್ಕು ದಶಕಗಳ ಸುದೀರ್ಘ ಅನುಭವದಲ್ಲಿ ಹಲವಾರು ಇತರ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಣಕಾಸು ವಲಯದಲ್ಲಿ ಅನೇಕ ನಿರ್ಣಾಯಕ ವಿಲೀನಗಳು ಮತ್ತು ಸ್ವಾಧೀನಗಳನ್ನು ಅನುಷ್ಠಾನಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.








