ಕೊರೊನಾ ವಿರುದ್ಧ ಹೋರಾಡಲು 2ಡಿಜಿ ಸಜ್ಜು : ಔಷಧ ಬಿಡುಗಡೆಗೊಳಿಸಿದ ರಾಜನಾಥ್ ಸಿಂಗ್
ನವದೆಹಲಿ : ಕೋವಿಡ್ ವಿರುದ್ಧ ಹೋರಾಡಲು ಡಿಆರ್ ಡಿಒ ಅಭಿವೃದ್ಧಿಪಡಿಸಿರುವ ಕೊರೊನಾ ಸೋಂಕು ನಿರೋಧಕವಾಗಿ ಕೆಲಸ ಮಾಡಬಲ್ಲ 2-ಡಿಆಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಔಷಧ ಇಂದು ಬಿಡುಗಡೆಯಾಗಿದೆ.
ಇದರ ಮೊದಲ ಡೋಸ್ ಅನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಳಗ್ಗೆ 10.30ಕ್ಕೆ ಬಿಡುಗಡೆಗೊಳಿಸಿದ್ದಾರೆ.
ಅಲ್ಲದೇ 2-ಡಿಆಕ್ಸಿ-ಡಿ-ಗ್ಲೂಕೋಸ್ ಔಷಧದ 10 ಸಾವಿರ ಡೋಸ್ ಗಳನ್ನು ಸಚಿವರು ಇದೇ ವೇಳೆ ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ವಿತರಿಸಲಿದ್ದಾರೆ.
2-ಡಿಜಿ ಔಷಧಿಯನ್ನು ಹೈದರಾಬಾದ್ ಮೂಲದ ಫಾರ್ಮಾ ದೈತ್ಯ ಡಾ.ರೆಡ್ಡಿಸ್ ಲ್ಯಾಬೊರೇಟರೀಸ್ ಸಹಯೋಗದೊಂದಿಗೆ ಡಿಆರ್‍ಡಿಒ ಲ್ಯಾಬ್ ತಯಾರಿಸಿದೆ.
ದೇಶದ ಔಷಧ ನಿಯಂತ್ರಕ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ತುರ್ತು ಬಳಕೆಗಾಗಿ ಈ ಔಷಧಿಯನ್ನು ಈಗಾಗಲೇ ಅನುಮೋದಿಸಿದೆ.