ರಜನಿಕಾಂತ್ ಹೊಸ ಪಕ್ಷದ ಹೆಸರು ಬಹಿರಂಗ.. ಚಿಹ್ನೆ ಏನು ಗೊತ್ತಾ..?
ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಈಗಾಗಲೇ ರಾಜಕೀಯ ಪ್ರವೇಶದ ಬಗ್ಗೆ ಅಧಿಕೃತಗೊಳಿಸಿದ್ದಾರೆ. ಆದ್ರೆ ಇದುವರೆಗೂ ಅವರು ತಮ್ಮ ಪಕ್ಷದ ಹೆಸರನ್ನಾಗಲಿ, ಚಿಹ್ನಯನ್ನಾಗಲಿ ಎಲ್ಲೂ ಬಹಿರಂಗ ಪಡಿಸಿಲ್ಲ.
ಡಿಸೆಂಬರ್ 31ರಂದು ತಮ್ಮ ಹೊಸ ಪಕ್ಷಕ್ಕೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸುವುದಾಗಿ ಮತ್ತು ಮುಂಬರುವ ಜನವರಿಯಲ್ಲಿ ಪಕ್ಷಕ್ಕೆ ಚಾಲನೆ ನೀಡುವುದಾಗಿ ರಜನಿ ಘೋಷಿಸಿಕೊಂಡಿದ್ದಾರೆ.
ಈ ಮಧ್ಯೆ ರಜಿನಿಕಾಂತ್ ತಮ್ಮ ಹೊಸ ಪಕ್ಷಕ್ಕೆ ‘ಮಕ್ಕೈ ಸೆವಾಯ್ ಕಚ್ಚಿ’ ಎಂದು ಹೆಸರಿಟ್ಟಿದ್ದಾರೆ ಮತ್ತು ಪಕ್ಷದ ಚಿಹ್ನೆ ‘ಆಟೋ ರಿಕ್ಷಾ’ ಎಂಬ ಸುದ್ದಿ ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ : ಚೆಟ್ಟಿನಾಡ್ ಸಮೂಹದಿಂದ 700 ಕೋಟಿ ರೂ. ತೆರಿಗೆ ವಂಚನೆ
ಅಂದಹಾಗೆ ಇದಕ್ಕೂ ಮುನ್ನ ಅಂದ್ರೆ ರಜಿನಿ ರಾಜಕೀಯಕ್ಕೆ ಬರಲಿದ್ದಾರೆ ಅನ್ನೋ ಸುದ್ದಿ ಪಕ್ಕಾ ಆದಾಗ ಮಕ್ಕಲ್ ಶಕ್ತಿ ಕಝಗಂ ಎಂದು ರಜನಿಕಾಂತ್ ಹೊಸ ಪಕ್ಷಕ್ಕೆ ಹೆಸರಿಟ್ಟಿದ್ದರು ಮತ್ತು ಬಾಬಾ ಮುದ್ರೆಯ ಚಿಹ್ನೆಗಾಗಿ ಮನವಿ ಸಲ್ಲಿಸಿದ್ದರಂತೆ.
ಆದರೆ, ಚುನಾವಣಾ ಆಯೋಗ ಆಟೋ ರಿಕ್ಷಾ ಚಿಹ್ನೆ ನೀಡಿದೆ ಎಂದು ಹೇಳಲಾಗ್ತಿದೆ.
ಇತ್ತ ಈ ತಿಂಗಳ ಅಂತ್ಯದಲ್ಲಿ ಪಕ್ಷದ ವಿವರಗಳನ್ನು ಬಹಿರಂಗ ಪಡಿಸುವುದಾಗಿ ಹೇಳಿರುವ ರಜಿನಿ, ರಜಿನಿ ಮಕ್ಕಲ್ ಮಂಡ್ರಂ ಸದಸ್ಯರೊಂದಿಗೆ ಹಲವು ಸಭೆಗಳನ್ನು ನಡೆಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel