ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದು, ನಾಳೆ ಅಧಿಕೃತವಾಗಿ ರಾಜಕೀಯ ಪಕ್ಷವನ್ನು ಘೋಷಿಸಲಿದ್ದಾರೆ ಎನ್ನಲಾಗಿದೆ. ರಜನಿ ನಾಳೆ ತಮ್ಮ ರಜನಿ ಮಕ್ಕಳ್ ಮಂದ್ರಂ ನ ಜಿಲ್ಲಾ ಕಾರ್ಯದರ್ಶಿಗಳ ಸಭೆ ಕರೆದಿದ್ದಾರೆ. ನಾಳೆ ಬೆಳಿಗ್ಗೆ ತಮ್ಮದೇ ಸ್ಪಂತ ಮ್ಯಾರೇಜ್ ಹಾಲ್ ನಲ್ಲಿ ಆರ್ ಎಂ ಎಂ ಕಾರ್ಯದರ್ಶಿಗಳ ಸಭೆ ಕರೆದಿರುವ ಅವರು, ಬೆಳಿಗ್ಗೆ 9ಗಂಟೆಗೆ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದ್ದಾರೆ. ಹೀಗಾಗಿ ಹಲವು ಮುಖಂಡರ ಮಾಹಿತಿ ಪ್ರಕಾರ ನಾಳೆ ಆರ್ ಎಂ ಎಂ ಕಾರ್ಯದರ್ಶಿಗಳ ಸಭೆಯಲ್ಲಿ ಹೊಸ ಪಕ್ಷದ ಮೂಲಕ ರಜನಿ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.








