ಇಂದು ವರನಟ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರ 91ನೇ ಜನ್ಮದಿನಾಚರಣೆ. ಪ್ರತೀವರ್ಷ ರಾಜ್ ಕುಮಾರ್ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು.
ಅಭಿಮಾನಿಗಳು ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಆದರೆ ಈ ವರ್ಷ ರಾಜ್ ಉತ್ಸವ ನಡೆಯುತ್ತಿಲ್ಲ. ಕೊರೊನಾ ಹಾವಳಿಯ ಪರಿಣಾಮ ಹುಟ್ಟುಹಬ್ಬವನ್ನು ಅದ್ದೂರಿಯಾರಿ ಆಚರಣೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಅಭಿಮಾನಿಗಳು ಮನೆಯಲ್ಲಿಯೇ ಡಾ.ರಾಜ್ ಸ್ಮರಣೆ ಮಾಡುತ್ತಿದ್ದಾರೆ.
ಈಗಾಗಲೆ ಸಾಕಷ್ಟು ಗಣ್ಯರು ರಾಜ್ ಕುಮಾರ್ ಜನ್ಮದಿನಾಚರಣೆಗೆ ಸಾಮಾಜಿಕ ಜಾಲತಾಣದ ಮೂಲಕ ಶುಭಕೋರುತ್ತಿದ್ದಾರೆ. ರಾಜ್ಯದ ಸಿಎಂ ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಟ್ವಿಟ್ಟರ್ ನಲ್ಲಿ ಡಾ.ರಾಜ್ ಜನ್ಮದಿನಾಚರಣೆಗೆ ವಿಶ್ ಮಾಡಿದ್ದಾರೆ.
ಕಲೆ ಹಾಗೂ ವಿನಯತೆಯ ಅಪೂರ್ವ ಸಂಗಮವಾಗಿರುವ ಡಾ. ರಾಜ್ ಕುಮಾರ್ ಅವರಿಗೆ ಜನ್ಮದಿನದ ಶುಭ ನಮನಗಳು. ಬೆಳ್ಳಿಪರದೆ ಹಾಗೂ ನಿಜಜೀವನದಲ್ಲೂ ಬಂಗಾರದ ಮನುಷ್ಯನಂತಿದ್ದ ಡಾ.ರಾಜಣ್ಣನವರಿಗೆ ಕನ್ನಡ ನಾಡು ಹಾಗು ನುಡಿಯ ಬಗ್ಗೆ ಇದ್ದ ಅದಮ್ಯ ಕಾಳಜಿ ಇಂದಿನ ಯುವಜನಾಂಗಕ್ಕೆ ಮಾದರಿ.#DrRajkumar pic.twitter.com/d6Evdl0nhB
— H D Devegowda (@H_D_Devegowda) April 24, 2020
“ನಟ ಸಾರ್ವಭೌಮ-ಕರ್ನಾಟಕ ರತ್ನ ಡಾ.ರಾಜ್ ಕುಮಾರ ಜನ್ಮದಿನದಂದು ಕರ್ನಾಟಕಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸೋಣ. ತಾಯಿ ಭುವನೇಶ್ವರಿಯ ಸೇವೆಗೆ ಕರೆ ಬಂದಾಗಲೆಲ್ಲ ಎದ್ದು ಬಂದ ಮಹಾನುಭಾವ ರಾಜಣ್ಣನವರು. ಮೂರು ತಲೆಮಾರಿನ ಕನ್ನಡಿಗರಿಗೆ ಮೌಲ್ಯ ತುಂಬಿದ ಮನರಂಜನೆ ನೀಡಿದ ಅವರನ್ನು ಆದರದಿಂದ ನೆನೆಯೋಣ” ಎಂದು ಸಿಎಂ ಬಿಎಸ್ ವೈ ಬರೆದುಕೊಂಡಿದ್ದಾರೆ.
https://twitter.com/BSYBJP/status/1253506369564504066
ಹೆಚ್ ಡಿಡಿ ಟ್ವೀಟ್ ನಲ್ಲಿ “ಕಲೆ ಹಾಗೂ ವಿನಯತೆಯ ಅಪೂರ್ವ ಸಂಗಮವಾಗಿರುವ ಡಾ. ರಾಜ್ ಕುಮಾರ್ ಅವರಿಗೆ ಜನ್ಮದಿನದ ಶುಭ ನಮನಗಳು. ಬೆಳ್ಳಿಪರದೆ ಹಾಗೂ ನಿಜಜೀವನದಲ್ಲೂ ಬಂಗಾರದ ಮನುಷ್ಯನಂತಿದ್ದ ಡಾ.ರಾಜಣ್ಣನವರಿಗೆ ಕನ್ನಡ ನಾಡು ಹಾಗು ನುಡಿಯ ಬಗ್ಗೆ ಇದ್ದ ಅದಮ್ಯ ಕಾಳಜಿ ಇಂದಿನ ಯುವಜನಾಂಗಕ್ಕೆ ಮಾದರಿ” ಎಂದಿದ್ದಾರೆ








