ನಿನ್ನೆ ಕಾಂಗ್ರೆಸ್ ಗೆ ಕೈ ಕೊಟ್ಟು ಇಂದು ಕಮಲ ಹಿಡಿದ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಬಿಜೆಪಿ ಗುಡ್ ನ್ಯೂಸ್ ನೀಡಿದ್ದು, ಮಧ್ಯಪ್ರದೇಶದಿಂದ ರಾಜ್ಯಸಭಾ ಟಿಕೆಟ್ ನೀಡಿದೆ.
ಈ ನಡುವೆ, ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆಗೆ ಬಿಜೆಪಿ ರಣತಂತ್ರವನ್ನೇ ಹೆಣೆದಿದೆ. ಈ ಮೊದಲೇ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ರಾಜ್ಯಸಭಾ ಟಿಕೆಟ್ ನೀಡಲು ಹಿರಿಯ ನಾಯಕರು ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಸಿಂಧಿಯಾ ಅವರಿಗೆ ಮಧ್ಯಪ್ರದೇಶದಿಂದ ರಾಜ್ಯಸಭಾ ಟಿಕೆಟ್ ಘೋಷಿಸಲಾಗಿದೆ. ಮಾರ್ಚ್ 26 ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ಸಿಂಧಿಯಾ ಅವರು ಮುಂದಿನ ಶುಕ್ರವಾರ ನಾಮಿನೇಷನ್ ಮಾಡಲಿದ್ದಾರೆ.
ಮಧ್ಯಪ್ರದೇಶದಲ್ಲಿನ ಕಮಲ್ ನಾಥ್ ಸರ್ಕಾರಕ್ಕೆ ಸೆಡ್ಡು ಹೊಡೆದ ಜ್ಯೋತಿರಾಧಿತ್ಯ ಸಿಂಧಿಯಾ ಕಳೆದ ಕೆಲ ದಿನಗಳಿಂದ ಪಕ್ಷದಲ್ಲಿನ ಆಂತರಿಕ ವಿಚಾರಗಳಿಂದ ಬೇಸತ್ತು ನಿನ್ನೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಅಷ್ಟೇ ಅಲ್ಲ, ಜ್ಯೋತಿರಾಧಿತ್ಯ ಸಿಂಧಿಯಾ ಬೆಂಬಲಿಗ ಶಾಸಕರು ಹಾಗೂ ಸಚಿವರು ರಾಜೀನಾಮೆ ನೀಡಿ ಸರ್ಕಾರಕ್ಕೆ ಬಿಗ್ ಶಾಕ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಸಿಂದಿಯಾ ಭೇಟಿಯಾಗಿದ್ದರು.
ರಾಜ್ಯಸಭೆ ಚುನಾವಣೆಗೆ ಬಿಜೆಪಿ ರೆಡಿ
ಮುಂಬರುವ ರಾಜ್ಯಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನ ಪ್ರಕಟ ಮಾಡಿದೆ. 9 ರಾಜ್ಯಗಳಲ್ಲಿ ತೆರವಾಗಿರುವ ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನ ಅನೌನ್ಸ್ ಮಾಡಿದೆ.
ಯಾವ ರಾಜ್ಯದಿಂದ ಯಾರು ಕಣಕ್ಕೆ..?
ಅಸ್ಸಾಂ-ಭುವನೇಶ್ವರ್ ಕಾಲಿತಾ
ಬಿಹಾರ್-ವಿವೇಕ್ ಠಾಕೂರ್
ಗುಜರಾತ್-ಅಭಯ್ ಭಾರದ್ವಾಜ್
ಜಾರ್ಖಂಡ್-ದೀಪಕ್ ಪ್ರಕಾಶ್
ಮಣಿಪುರ-ಲಿಯೆಸೋಭಾ ಮಹಾರಾಜ್
ಮಧ್ಯಪ್ರದೇಶ-ಜ್ಯೋತಿರಾಧಿತ್ಯ ಸಿಂಧಿಯಾ
ಮಹಾರಾಷ್ಟ್ರ-ಶ್ರೀಮಂತ್ ಉದಯನ್
ರಾಜಸ್ಥಾನ್- ರಾಜೇಂದ್ರ ಗೆಹ್ಲೋಟ್








