RajyaSabha : ಕಲಾಪಕ್ಕೆ ಅಡ್ಡಿ ಪ್ರತಿಪಕ್ಷದ 19 ಸಂಸದರು 1 ವಾರ ಅಮಾನತು
ರಾಜ್ಯಸಭಾ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 19 ಪ್ರತಿಪಕ್ಷ ಸಂಸದರನ್ನು ಒಂದು ವಾರ ಅಮಾನತು ಮಾಡಲಾಗಿದೆ. ಪ್ರತಿಭಟನೆ, ಧರಣಿಗಳಿಂದ ಸದನಕ್ಕೆ ನಿರಂತರವಾಗಿ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸಭಾ ಅಧ್ಯಕ್ಷರು ಈ ನಿರ್ಧಾರ ಕೈಗೊಂಡಿದ್ದಾರೆ.
ಈ ನಿರ್ಧಾರಕ್ಕೆ ರಾಜ್ಯಸಭಾ ನಾಯಕ ಮತ್ತು ಸಚಿವ ಪಿಯೂಷ್ ಗೋಯಲ್ ಪ್ರತಿಕ್ರಿಯಿಸಿದ್ದು, ವಿರೋಧ ಪಕ್ಷದ ಸಂಸದರನ್ನ ಅಮಾನತು ಮಾಡಬೇಕಾಗಿದ್ದು, ಭಾರವಾದ ಹೃದಯದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಸಂಸದರ ಅಮಾನತು ಕುರಿತು ತೃಣಮೂಲ ಕಾಂಗ್ರೆಸ್ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದೆ. ಸಂಸದರನ್ನು ಅಮಾನತು ಮಾಡಬಹುದು.. ಆದರೆ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದೇ ವೇಳೆ ಏಕಕಾಲಕ್ಕೆ 19 ಸಂಸದರನ್ನು ಅಮಾನತು ಮಾಡಿರುವುದರಿಂದ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆ ಇದೆ.
ಇವರೇ ಅಮಾನತುಗೊಂಡ ಸಂಸದರು..1. ಸುಶ್ಮಿತಾ ದೇವ್ (ತೃಣಮೂಲ ಕಾಂಗ್ರೆಸ್) 2. ಮೌಸಮ್ ನೂರ್ (ತೃಣಮೂಲ ಕಾಂಗ್ರೆಸ್)3. ಸಾಂತಾ ಛತ್ರಿ (ತೃಣಮೂಲ ಕಾಂಗ್ರೆಸ್)4. ಶಾಂತನೂ ಸೇನ್ (ತೃಣಮೂಲ ಕಾಂಗ್ರೆಸ್) 5. ಡೋಲಾ ಸೇನ್ (ತೃಣಮೂಲ ಕಾಂಗ್ರೆಸ್)6. ಅಭಿ ರಂಜನ್ ಬಿಸ್ವರ್ (ತೃಣಮೂಲ ಕಾಂಗ್ರೆಸ್)7. ಎಂಡಿ ನದೀಮುಲ್ ಹಕ್ (ತೃಣಮೂಲ ಕಾಂಗ್ರೆಸ್).8. ಎಂ ಹಮೀದ್ ಅಬ್ದುಲ್ಲಾ (ಡಿಎಂಕೆ)9. ಬಿ ಲಿಂಗಯ್ಯ ಯಾದವ್ (ಟಿಆರ್‌ಎಸ್)10. ಎಎ ರಹೀಮ್ (ಸಿಪಿಐ (ಎಂ))11. ರವಿಚಂದ್ರ (ಟಿಆರ್‌ಎಸ್)12. ಎಸ್ ಕಲ್ಯಾಣಸುಂದರಂ (ಡಿಎಂಕೆ) ೧೩. ಆರ್ ಗಿರಂಜನ್ (ಡಿಎಂಕೆ)14. ಎನ್ ಇಲಾಂಗೋ(ಡಿಎಂಕೆ)15. ವಿ. ಶಿವದಾಸನ್ (ಸಿಪಿಐ(ಎಂ))16. ಎಂ ಷಣ್ಮುಗಂ (ಡಿಎಂಕೆ)17. ದಾಮೋದರ್ ರಾವ್ (ಟಿಆರ್ಎಸ್) 18. ಸಂತೋಷ್ ಕುಮಾರ್ (ಸಿಪಿಐ) 19. ಕನಿಮೊಳಿ ಎನ್ವಿಎನ್ ಸೋಮು (ಡಿಎಂಕೆ).
ಬೆಲೆ ಏರಿಕೆ, ಜಿಎಸ್‌ಟಿ ಹೆಚ್ಚಳದಂತಹ ವಿಷಯಗಳ ಕುರಿತು ರಾಜ್ಯಸಭೆಯಲ್ಲಿ ಕೂಡಲೇ ಬೆಲೆ ಏರಿಕೆ ಕುರಿತು ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳ ಸಂಸದರು ಒತ್ತಾಯಿಸಿದರು. ಇದಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ನಿಯಮ 267ರ ಅಡಿಯಲ್ಲಿ ಚರ್ಚೆಯನ್ನು ಕೈಗೆತ್ತಿಕೊಳ್ಳುವಂತೆ ಸಭಾಪತಿಗೆ ಪ್ರಸ್ತಾವನೆ ಸಲ್ಲಿಸಲಾಯಿತು.