ರಾಜ್ಯ ಬಿಜೆಪಿ ನಾಯಕರಿಕೆ `ಹೈ’ ಕಮಾಂಡ್ ಶಾಕ್
ನವದೆಹಲಿ : ರಾಜ್ಯಸಭಾ ಚುನಾವಣೆ ಹಿನ್ನೆಲೆ ರಾಜ್ಯ ಬಿಜೆಪಿ ನಾಯಕರಿಗೆ ಪಕ್ಷದ ಹೈಕಮಾಂಡ್ ಶಾಕ್ ನೀಡಿದೆ.
ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿಯವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬಿಜೆಪಿ ಹೈಕಮಾಂಡ್ ಅಚ್ಚರಿಯ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.
ರಾಜ್ಯಸಭಾ ಸ್ಥಾನಕ್ಕಾಗಿ ಡಿಸೆಂಬರ್ 1ರಂದು ಚುನಾವಣೆ ನಡೆಯಲಿದ್ದು ನವೆಂಬರ್ 18ಕ್ಕೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ.
ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯಲ್ಲಿ ತಪ್ಪೇನು : ಸಿ.ಟಿ.ರವಿ
ಇಂದು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಕೆ. ನಾರಾಯಣ ಅವರ ಹೆಸರನ್ನು ಘೋಷಿಸಿದೆ.
ಕೆ. ನಾರಾಯಣ ಅವರು ಮಂಗಳೂರು ಮೂಲದವರಾಗಿದ್ದು, ಕಳೆದ ಕೆಲವು ದಶಕಗಳಿಂದ ಆರ್ ಎಸ್ಎಸ್ ನಲ್ಲಿ ಸಕ್ರೀಯ ಕಾರ್ಯಕರ್ತರಾಗಿದ್ದಾರೆ.
ಸದ್ಯ ಕೆ.ನಾರಾಯಣ್ ಅವರು ಬೆಂಗಳೂರಿನಲ್ಲಿ ಸ್ವಾನ್ ಪ್ರಿಂಟರ್ಸ್ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.
ಇದಲ್ಲದೆ ‘ಸಂಭಾಷಣಾ ಸಂದೇಶ’ ಎಂಬ ಸಂಸ್ಕøತ ಭಾಷೆಯ ಮಾಸಿಕ ಪತ್ರಿಕೆಯನ್ನು ನಾರಾಯಣ ಅವರು ಹೊರತರುತ್ತಿದ್ದು, ‘ತುಳುವೆರೆ ಕೇದಿಗೆ’ ಎಂಬ ತುಳು ಮ್ಯಾಗಜಿನ್ ನ ಸಂಪಾದಕರಾಗಿದ್ದಾರೆ.
ಪೇಟೆರೌಡಿ.. ಜಲೀಲ.. ಸುಮಲತಾ – ಪ್ರತಾಪ್ ಸಿಂಹ ಮಧ್ಯೆ ವಾಗ್ಯುದ್ಧ
ಅಂದಹಾಗೆ ರಾಜ್ಯಸಭಾ ಚುನಾವಣೆಗೆ ರಾಜ್ಯ ಬಿಜೆಪಿ ನಾಯಕರು ಅಶೋಕ್ ಗಸ್ತಿ ಪತ್ನಿ ಸುಮಾ ಗಸ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಶಂಕರಪ್ಪ, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ ಹೆಸರನ್ನು ಸೂಚಿಸಿದ್ದರು.
ಆದರೆ ರಾಜ್ಯದ ಶಿಫಾರಸ್ಸನ್ನು ತಿರಸ್ಕರಿಸಿರುವ ಕೇಂದ್ರದ ನಾಯಕರು ಮತ್ತೊಮ್ಮೆ ಹೊಸ ಮುಖಕ್ಕೆ ಮಣೆ ಹಾಕಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel