ಮೋದಿ ಭದ್ರತಾ ಲೋಪ – ಇದು ಸಿಂಪಥಿಗಳಿಸುವುದಕ್ಕೆ ಗಿಮಿಕ್ಸ್, ರಾಕೇಶ್ ಟಿಕಾಯತ್
ಪ್ರಧಾನಿ ನರೇಂದ ಮೋದಿಯವ ಭದ್ರತೆಯ ಲೋಪಕ್ಕೆ ಸಂಬಂಧಿಸಿದಂತೆ ರೈತ ನಾಯಕ ರಾಕೇಶ್ ಟಿಕಾಯತ್ ಮಾತನಾಡಿ ಇದು ಸಿಂಪಥಿಗಳಿಸುವುದಕ್ಕೆ ಚೀಪ್ ಗಿಮಿಕ್ಸ್ ಎಂದು ಹೇಳಿದ್ದಾರೆ.
“ಭದ್ರತಾ ಲೋಪವಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ ಮತ್ತು ಪಂಜಾಬ್ ಸರ್ಕಾರವು ಪ್ರಧಾನಿ ಅವರ ರ್ಯಾಲಿಯಲ್ಲಿ ಕುರ್ಚಿಗಳು ಖಾಲಿ ಇದ್ದ ಕಾರಣ ಅಲ್ಲಿಗೆ ಹೋಗಲಿಲ್ಲ ಎಂದು ಹೇಳುತ್ತದೆ. ಇಬ್ಬರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಾತ್ರ ಪ್ರಯತ್ನಿಸುತ್ತಿದ್ದಾರೆ. ಪ್ರಧಾನಿ ಅಲ್ಲಿಗೆ ಹೋಗಬಾರದಿತ್ತು”: ಎಂದು ಆಂಗ್ಲ ಸುದ್ದಿವಾಹಿನಿ ಎಎನ್ ಐ ಗೆ ತಿಳಸಿದ್ದಾರೆ.
ಪ್ರಧಾನಿ ಪಂಜಾಬ್‌ಗೆ ಬರುವಾಗ ಭದ್ರತೆಗೆ ಸಂಬಂಧಿಸಿದಂತೆ ಏನು ವ್ಯವಸ್ಥೆ ಮಾಡಿದ್ದರು? ಅವರು ಬದುಕುಳಿದಿದ್ದಾರೆ ಎಂದು ಹೇಳುವ ಸುದ್ದಿಯು ಇದು ಸ್ಟಂಟ್ ಎಂದು ಸ್ಪಷ್ಟಪಡಿಸುತ್ತದೆ. ಇದು ಸಾರ್ವಜನಿಕ ಸಹಾನುಭೂತಿ ಪಡೆಯಲು ಚೀಪ್ ಮಾರ್ಗವನ್ನು ಕಂಡುಕೊಳ್ಳುವ ಪ್ರಯತ್ನವಾಗಿದೆ ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದರು.