ದೇಶಾದ್ಯಂತ ಆಕ್ರೋಶ ಭುಗಿಲೇಲಿಸಿರುವ ಕನ್ಹಯ್ಯ ಲಾಲ್ ಭೀಕರ ಹತ್ಯೆ ಪ್ರಕರಣ , ದೇಶದ ಜನರ ರಕ್ತ ಕುದಿಯುವಂತೆ ಮಾಡಿರುವ ಈ ಪ್ರಕರಣ ತುಂಬಾ ಚಿಕ್ಕ ವಿಚಾರ ಎಂದಿದ್ದಾರೆ ರೈತ ನಾಯಕ ರಾಕೇಶ್ ಟಿಕಾಯತ್..
ಹೌದು..! ಉದಯ್ಪುರದಲ್ಲಿ ನಡೆದ ಟೈಲರ್ ಶಿರಚ್ಛೇದನ ಸಣ್ಣ ವಿಷಯವಾಗಿದೆ. ಇದರಲ್ಲಿ ಬಿಜೆಪಿ ಪಾಕಿಸ್ತಾನದ ಕೈವಾಡ ಹುಡುಕಲು ಹೊರಟಿದೆ ಎಂದು ಹತ್ಯೆಯನ್ನ ಸಮರ್ಥಿಸಿಕೊಂಡು ಈಗ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ..
ಇಡೀ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ, ಜಸ್ಟೀಸ್ ಫಾರ್ ಕನ್ಹಯ್ಯ ಲಾಲ್ ಟ್ರೆಂಡ್ ಆಗ್ತಿದೆ.. ಆದ್ರೆ ಇದು ಚಿಕ್ಕ ವಿಚಾರ ಎಂದು ಅಸಡ್ಡೆ ಹೇಳಿಕೆಯನ್ನ ನೀಡಿದ್ದಾರೆ ರೈತ ಮುಖಂಡರಾದ ಟಿಕಾಯತ್ ಅವರು..
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಘಟನೆಗಳು ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಏಕೆ ನಡೆಯುತ್ತವೆ. ಹೀಗೆ ಏನಾದರೂ ಸಣ್ಣ ಘಟನೆ ಸಂಭವಿಸಿದರೂ ಬಿಜೆಪಿ ಪಾಕಿಸ್ತಾನದ ಕೈವಾಡವನ್ನು ಹುಡುಕಲು ಹೋಗುತ್ತದೆ ಎಂದು ಕಿಡಿಕಾರಿದ್ದಾರೆ.
ರಾಜಸ್ಥಾನ ಅಥವಾ ಪಂಜಾಬ್ ರಾಜ್ಯಗಳಲ್ಲಿ ಈ ರೀತಿ ಘಟನೆಗಳು ಹೆಚ್ಚುತ್ತಿವೆ. ಇದು ಬಿಜೆಪಿಯ ಸಮಯವಾಗಿದೆ. ಕೇಂದ್ರದಲ್ಲಿ ಇರುವವರು ಇದೆಲ್ಲವನ್ನು ಮಾಡಿಸುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಏನಾದರೂ ಚಿಕ್ಕ ಘಟನೆ ನಡೆದರೂ ಬಿಜೆಪಿ ಪಾಕಿಸ್ತಾನ ಭಾಗಿಯಾಗಿದೆ ಎಂದು ಹೇಳುತ್ತಾರೆ ಎಂದು ಕಿಡಿಕಾರಿದ್ದಾರೆ..
ಭಾರತದಲ್ಲಿ ಸಂವಿಧಾನ, ಕಾನೂನು ಮತ್ತು ಸೆಕ್ಷನ್ ಗಳಿವೆ. ಆದರೆ ಅವೆಲ್ಲವೂ ಏನು ಮಾಡುತ್ತಿವೆ. ಇದರ ಬದಲು ಪಾಕಿಸ್ತಾನವನ್ನು ಗುರಿಯಾಗಿಸುತ್ತಿದ್ದಾರೆ. ಇದರಲ್ಲಿ ಪಾಕಿಸ್ತಾನದವರು ಏನು ಮಾಡಿದ್ದಾರೆ. ಈ ಕೊಲೆ ಮಾಡಿದವರನ್ನು ಕಾನೂನಿನ ನಿಯಮಾನುಸಾರ ಬಂಧಿಸಿ ಎಂದಿದ್ದಾರೆ.








