Rakhi Sawanth : ಸಾಮಿ… ಸಾಮಿ ಎಂದು ‘ರಾಖಿ’ ಸ್ಟೈಲಲ್ಲೇ ಸ್ಟೆಪ್ ಹಾಕಿದ ಡ್ರಾಮಾ ಕ್ವೀನ್…
ಸಾಮಿ… ಅರೇ ಸಾಮಿ… ಈ ಹಾಡಿನ ಕ್ರೇಜ್ ಎಷ್ಟಿದೆ ಎಂದು ಗೊತ್ತಾಗೋದಕ್ಕೆ ಸೋಷಿಯಲ್ ಮೀಡಿಯಾ ಸ್ಕ್ರೋಲ್ ಮಾಡಿದರೆ ಸಾಕು.. ಸೆಲೆಬ್ರಿಟಿಗಳಿಂದ ಹಿಡಿದು, ಸೋಷಿಯಲ್ ಮೀಡಿಯಾ ಸ್ಟಾರ್ ಗಳು , ಪುಟ್ಟಮಕ್ಕಳು , ಕ್ರಿಕೆಟಿಗರೂ ಈ ಹಾಡಿಗೆ ರೀಲ್ಸ್ ಮಾಡಿರೋದನ್ನ ನೋಡಬಹುದು..
ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಭರ್ಜರಿ ಸ್ಟೆಪ್ಸ್ ಹಾಕಿದ್ದ ಈ ಹಾಡು, ಬೀಟ್ಸ್ ಜೊತೆಗೆ ಮ್ಯೂಸಿಕ್ , ಲಿರಿಕ್ಸ್ ಸ್ಟೆಪ್ಸ್ ನಿಂದ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ..
ಇದೀಗ ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ಸಾಮಿ ಸಾಮಿಗೆ ರಾಖೀ ಸ್ಟೈಲ್ ನಲ್ಲಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.. ರಾಖಿ ಡ್ಯಾನ್ಸ್ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ…
https://www.instagram.com/reel/CaLAleJhbWa/?utm_source=ig_web_copy_link
ಬಾಲಿವುಡ್ ನ ನೌಟಂಕಿ ರಾಣಿ ರಾಖಿ ಸದಾ ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಲ್ಲೇ ಇರುತ್ತಾರೆ.. ಕೆಲ ದಿನಗಳ ಹಿಂದಷ್ಟೇ ಬಿಗ್ ಬಾಸ್ ನನ್ನ ಯೂಸ್ ಮಾಡಿಕೊಳ್ತಾರೆ ,,, ಎಂಟರ್ ಟೈನ್ ಮೆಂಟ್ ಮುಗಿದ ಮೇಲೆ ಎಲಿಮಿನೇಟ್ ಮಾಡ್ತಾರೆ.. ನಿಜವಾಗಲೂ ಟ್ರೋಫಿಗೆ ನಾನು ಅರ್ಹಳು ಎಂದು ಕಣ್ಣೀರಿಟ್ಟಿದ್ದರು.. ನಂತರ ಬಿಗ್ ಬಾಸ್ ಸೀಸನ್ 15 ರ ಗ್ರ್ಯಾಂಡ್ ಫಿನಾಲೆಯಲ್ಲಿ ವಿಚಿತ್ರ ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಂಡಿದ್ರು.. ಅಲ್ಲದೇ ಉದ್ಯಮಿ ರಿತೇಶ್ ಎಂಬಾತನ ಜೊತೆಗೆ ಮದುವೆಯಾಗಿ ಎಂದು ಆತನನ್ನ ಪರಿಚಯವೂ ಮಾಡಿಸಿದ್ದರು.. ಅಲ್ಲದೇ ಪತಿ ಜೊತೆಗೆ ಪಬ್ಲಿಕಲಿ ಮಾಧ್ಯಮದವರ ಮುಂದೆಯೇ ಮುತ್ತಿಟ್ಟಿದ್ದರು..
ಅದಾದ 2 -3 ದಿನಗಳ ಅಂತರದಲ್ಲೇ ಬ್ರೇಕ್ ಅಪ್ ಅಂತ ಕಣ್ಣೀರಿಟ್ಟಿದ್ದರು.. ಈಗ ನೋಡಿದ್ರೆ ತಮ್ಮ ಫ್ರೆಂಡ್ ಜೊತೆಗೆ ಸಾಮಿ ಸಾಮಿ ಹಾಡಿಗೆ ಮಸ್ತ್ ಸ್ಟೆಪ್ಸ್ ಹಾಕಿ , ಜಾಲಿ ಮೂಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಷಗಳ ಹಿಂದೆ ಬಾಲಿವುಡ್ ನ ದುಬಾರಿ ಸಿನಿಮಾಗಳ ಐಟಂ ಹಾಡುಗಳಿಗೆ ರಾಖಿ ಹೆಜ್ಜೆ ಹಾಕ್ತಿದ್ದರು.. ಆದ್ರೆ ಅವರ ನೌಟಂಕಿಗಳು , ಕಾಂಟ್ರವರ್ಸಿಗಳಿಂದ ಈಗ ಸಿನಿಮಾರಂಗದಲ್ಲಿ ಚಾನ್ಸ್ ಗಳನ್ನ ಕಳೆದುಕೊಂಡಿದ್ದಾರೆ..
https://www.instagram.com/reel/CaLAleJhbWa/?utm_source=ig_web_copy_link








