ನಟಿ ರಶ್ಮಿಕಾ ಮಂದಣ್ಣ, ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಂಡ್ ಟೀಂ ರೀತಿಯಲ್ಲೇ ನಿರ್ದೇಶಕರು ಮತ್ತು ಕಥೆಗಾರರ ಟೀಂ ಕಟ್ಟಲು ಮುಂದಾಗಿದ್ದಾರೆ ಅನ್ಸುತ್ತೆ. ಯಾಕೆಂದ್ರೆ “ನಿಮ್ಮಲ್ಲಿ ಒಳ್ಳೆಯ ಕಥೆ, ಕಾನ್ಸೆಪ್ಟ್ ಇದ್ದರೆ, ನಿರ್ದೇಶಕರಾಗಬೇಕು ಅನ್ನೊ ಹಂಬಲ ಇದ್ದರೆ ತಮ್ಮ ಟೀಂನ ಸಂಪರ್ಕಿಸುವಂತೆ” ರಶ್ಮಿಕಾ ಹೇಳಿದ್ದಾರೆ. ಈ ಬಗ್ಗೆ ರಶ್ಮಿಕಾ ತಮ್ಮ ಇನ್ ಸ್ಟಾಗ್ರಾಂ ಸ್ಟೇಟಸ್ ನಲ್ಲಿ ವಿಡಿಯೋ ಮೂಲಕ ತಿಳಿಸಿದ್ದಾರೆ.
‘ಹಾಯ್, ಫ್ರೆಂಡ್ಸ್.. ನಿಮ್ಮೆಲ್ಲರ ಜೊತೆ ನಾನೊಂದು ವಿಷಯವನ್ನ ಹೇಳಿಕೊಳ್ಳಬೇಕು ಅಂತಾ ಕಾತರದಿಂದಿದ್ದೀನಿ. ನಿಮ್ಮ ಬಳಿ ಹೊಸ ಹೊಸ ಕಾನ್ಸೆಪ್ಟ್ ಗಳು, ಐಡಿಯಾಗಳು, ಕಥೆಗಳು ಇದ್ರೆ ಪ್ಲೀಸ್ ಅದನ್ನ ನಮಗೆ ಇ-ಮೇಲ್ ಮೂಲಕ ಶೇರ್ ಮಾಡಬಹುದು. ನಾನು ಹಾಗೂ ನನ್ನ ಟೀಂ ಒಟ್ಟಿಗೆ ಕೂತು ಇ-ಮೇಲ್ ಗಳನ್ನ ನೋಡಿ ಐಡಿಯಾಗಳು ಚೆನ್ನಾಗಿದ್ರೆ ಅದನ್ನ ವರ್ಕ್ ಔಟ್ ಮಾಡ್ತೀವಿ. ನಿಮ್ಮ ಜೊತೆ ಸಂಪರ್ಕದಲ್ಲಿರ್ತೀವಿ. ನಮ್ಮದು ಪುಟ್ಟ ಟೀಂ, ನಿಮಗೆ ಪ್ರತಿಕ್ರಿಯಿಸೋಕೆ ಟೈಂ ತಗೋಬಹುದು, ಸಹಕರಿಸಿ ಎಂದಿದ್ದಾರೆ ನಟಿ ರಶ್ಮಿಕಾ.








