‘ಸಾನ್ವಿ’ ಟ್ವೀಟ್ ಗೆ ‘ಕಿರಿಕ್’ ಮರೆತು ‘ಕರ್ಣ’ ರೀಟ್ವೀಟ್..!
ರಿಯಲ್ ಜೆಂಟಲ್ ಮೆನ್ ರಕ್ಷಿತ್ ಶೆಟ್ಟಿ
2016 ರಲ್ಲಿ ತೆರೆಕಂಡಿದ್ದ ಕಿರಿಕ್ ಪಾರ್ಟಿ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಈ ಸಿನಿಮಾ ಯುವ ಪ್ರೇಕ್ಷರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಇನ್ನೂ ಈ ಸಿನಿಮಾದ ಒಂದೊಂದು ಹಾಡುಗಳು ಸೂಪರ್ ಹಿಟ್.. ಅದ್ರಲ್ಲೂ ರಷ್ಮಿಕಾ ನ್ಯಾಷನಲ್ ಕ್ರಷ್ ಅನ್ನಿಸಿಕೊಳ್ಳೋದಕ್ಕೆ ಕಾರಣವಾಗಿದ್ದು ಆ ಒಂದು ಸಾಂಗ್.. ಅದೇ ಬೆಳಗೆದ್ದು ಯಾರ ಮುಖವ ನಾನು ನೋಡಿದೆ. ಈ ಜೋಡಿಯ ಅದ್ಭುತ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಈ ಹಾಡು 100 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.
ಹೌದು… ಈ ಹಾಡು 100 ಮಿಲಿಯನ್ ವೀವ್ಸ್ ಪಡೆದಿದ್ದು, ರಕ್ಷಿತ್ ಶೆಟ್ಟಿ, ರಷ್ಮಿಕಾ ಮಂದಣ್ಣ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಇರಿಕ್ ಪಾರ್ಟಿ ಸಿನಿಮಾ ಜರ್ನಿ ನೆನೆದಿದ್ದಾರೆ. ವಿಷೇಶ ಎಂದ್ರೆ 3 ವರ್ಷಗಳ ಹಿಂದೆ ಬ್ರೇಕ್ ಅಪ್ ಮಾಡಿಕೊಂಡಿದ್ದ ರಷ್ಮಿಕಾ, ರಕ್ಷಿತ್ ಪರಸ್ಪರ ಒಬ್ಬರನ್ನೊಬ್ಬರು ನೆನಪು ಮಾಡಿಕೊಂಡು ಶುಭಹಾರೈಸುವ ಮೂಲಕ ನೆಟ್ಟಿಗರನ್ನ ಫಿದಾಗೊಳಿಸಿದ್ಧಾರೆ.
ಹೌದು ಎಂಗೇಜ್ ಮೆಂಟ್ ಗೂ ತಿರುಗಿದ್ದ ಈ ಜೋಡಿ ಕೊನೆಗೆ ಕಾರಣಾಂತರಗಳಿಂದ ಬ್ರೇಕ್ ಮಾಡಿಕೊಂಡಿತ್ತು. ಈ ಮೂಲಕ ಈ ಜೋಡಿ ಒಂದಾಗೋದನ್ನ ಕಣ್ತುಂಬಿಕೊಳ್ಳೋ ಕನಸು ಕಾಣ್ತಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿತ್ತು. ಈಗಲೂ ಈ ಜೋಡಿ ಮತ್ತೆ ಒಂದಾಗಬೇಕು ಅಂತ ಕೆಲವರು ಕಾಯುತ್ತಿದ್ದಾರೆ. ಹೀಗಿರೋವಾಗ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ನೆನಪು ಮಾಡಿಮಕೊಂಡಿರೋದಕ್ಕೆ ನೆಟ್ಟಿಗರು ಖುಷ್ ಆಗಿದ್ದಾರೆ. ತರಹೇವಾರಿ ಕಮೆಂಟ್ ಗಳನ್ನ ಮಾಡ್ತಿದ್ದಾರೆ. ಇನ್ನೂ ಕೆಲವರು ಈ ಜೋಡಿ ಮತ್ತೆ ಒಂದಾಗೋದನ್ನ ನೋಡಬೇಕು ಅಂತೆಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುವರತ್ನದ 2ನೇ ಹಾಡು ಕನ್ನಡ – ತೆಲುಗಿನಲ್ಲಿ ರಿಲೀಸ್..!
ಇನ್ನೂ ಅಷ್ಟೇ ಅಲ್ಲ ರಷ್ಮಿಕಾ ಮಂದಣ್ಣ ತಮ್ಮ ಮೊದಲ ಸಿನಿಮಾ, ಮೊದಲ ಸಾಂಗ್ ಬಗ್ಗೆ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷ ಎಂದ್ರೆ ಅವರು ಈ ಟ್ವೀಟ್ ನ ನಟ ರಕ್ಷಿತ್ ಶೆಟ್ಟಿಗೆ ಟ್ಯಾಗ್ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ಇದಕ್ಕೆ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ರಷ್ಮಿಕಾ ಟ್ವಿಟ್ ರೀ ಟ್ವೀಟ್ ಮಾಡೋ ಮೂಲಕ ತುಂಬ , ತುಂಬ, ತುಂಬಾನೇ ಎತ್ತರಕ್ಕೆ ಬೆಳಿ ಹುಡುಗಿ ಅಂತ ಮನತುಂಬಿ ಹಾರೈಸಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಟ್ವೀಟ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಕಮೆಂಟ್ ಗಳ ಸುರಿಮಳೆ ಸುರಿಸಿದ್ದಾರೆ.
ರಷ್ಮಿಕಾ ಮಂದಣ್ಣ ಟ್ವೀಟ್ ನಲ್ಲಿ ಏನಿದೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ರಶ್ಮಿಕಾ ಮಂದಣ್ಣ, ‘ಬೆಳಗೆದ್ದು ಯಾರ ಮುಖವ.. ನನ್ನ ಮೊದಲ ಹಾಡು… ಇದೀಗ ಇದು ನಿಮ್ಮೆಲ್ಲರ ಪ್ರೀತಿಯಿಂದ ನೂರು ಮಿಲಿಯನ್ ತಲುಪಿದೆ. ಈ ಹಾಡಿನ ಚಿತ್ರೀಕರಣ ಮಾಡಿದ್ದು ನನಗಿನ್ನೂ ನೆನಪಿದೆ’ ಅಂತ ಹೇಳಿದ್ದರು.
ರಕ್ಷಿತ್ ಟ್ವೀಟ್ ನಲ್ಲಿ ಏನಿದೆ.
‘ಇನ್ನಷ್ಟು ಬೆಳೆವ ನಿನ್ನ ಕನಸುಗಳೆಲ್ಲವೂ ನನಸಾಗಲಿ’ ಎಂದಿದ್ದಾರೆ. ಇನ್ನೂ ಈ ಹಿಂದೆ ಹಾಡಿನ ಬಗ್ಗೆ ಟ್ವೀಟ್ ಮಾಡಿದ್ದ ರಕ್ಷಿತ್ ಅವರು ‘ನಮ್ಮ ಈ ಜರ್ನಿಯಲ್ಲಿ ನಮ್ಮ ಜೊತೆಯಾಗಿದ್ದ ನಿಮ್ಮೆಲ್ಲರಿಗೂ ಧನ್ಯವಾದಗಳು’ ಎಂದು ಅಭಿಮಾನಿಗಳಿಗೆ ಕೃತಜ್ಞತೆಗಳನ್ನ ಸಲ್ಲಿಸಿದ್ದರು.
ಸದ್ಯ ಸಸ್ಯಾಂಡಲ್ ವುಡ್ ಕಿರಿಕ್ ಪಾರ್ಟಿ ಮೂಲಕ ನ್ಯಾಷನಲ್ ಕ್ರಷ್ ಎಂಬ ಪಟ್ಟ ಹೊತ್ತ ರಷ್ಮಿಕಾ ತದನಂತರ ತೆಲುಗು ತಮಿಳಿನಲ್ಲಿ ಹೆಸರು ಮಾಡಿ ಸಾಕಷ್ಟು ಪ್ರಾಜೆಕ್ಟ್ ಗಳನ್ನ ಗಿಟ್ಟಿಸಿಕೊಂಡು 2ಟಾಪ್ ನಟಿಯರಲ್ಲಿ ಒಬ್ಬರಾದರು. ಇದೀಗ ಬಾಲಿವುಡ್ ನಲ್ಲಿ ಸಿದ್ದಾರ್ಥ್ ಮಲ್ಹೋತ್ರ ಅಭಿನಯದ ‘ಮಿಷನ್ ಮಜ್ನು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಮೂಲಕ ಬಾಲಿವುಡ್ ಗೂ ಕೊಡಗಿನ ಬೆಡಗಿ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಸಾಧನೆಯ ಶಿಖರವೇರುತ್ತಿದ್ದರೂ ರಷ್ಮಿಕಾ ತಮಗೆ ಹೆಸಸರು ತಂದುಕೊಟ್ಟ ತಮ್ಮನ್ನ ಬೆಳಸಿದ ಸಿನಿಮಾವನ್ನ ಅವರ ಜರ್ನಿಯನ್ನ ಮರೆತಿಲ್ಲ. ಹಿಂದಿನ ದಿನಗಳು, ಮೊದಲ ಸಿನಿಮಾವನ್ನ ನೆನೆದದಿರೋದು ಅಭಿಮಾನಿಗಳಿಗೆ ಸಂತಸ ತಂದಿದೆ.
ನೆಟ್ಟಿಗರ ಕಮೆಂಟ್ ನಲ್ಲಿ ಏನಿದೆ
ಇನ್ನೂ ರಕ್ಷಿತ್ ಟ್ವೀಟ್ ಗೆ ಕಮೆಂಟ್ ಗಳ ಸುರಿಮಳೆಗಳೆ ಸುರಿಸಿರುವ ನೆಟ್ಟಿಗರು ರಕ್ಷಿತ್ ಶೆಟ್ಟಿ ಟ್ರೂ ಜೆಂಟಲ್ ಮೆನ್, ಕೈಂಡ್ ಹಾರ್ಟೆಡ್ ಹೀಗೆ ನಾನಾ ಕಮೆಂಟ್ ಗಳನ್ನ ಮಾಡಿ ರಕ್ಷಿತ್ ಅವರ ಗುಣವನ್ನ ಗುನಗಾನ ಮಾಡಿದ್ದಾರೆ. 3 ವರ್ಷಗಳ ಹಿಂದೆ ಬ್ರೇಕ್ ಆದ ಕಹಿ ಅನುಭವವನ್ನ ಮರೆತು, ರಷ್ಮಿಕಾಗೆ ಒಳ್ಳೆಯದಾಗಲಿ ಅಂತ ಬಯಸಿರೋ ರಕ್ಷಿತ್ ಶೆಟ್ಟಿ ಅವರ ಗುಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ರಕ್ಷಿತ್ ಶೆಟ್ಟಿ ಮತ್ತೆ ರಷ್ಮಿಕಾ ಮೇಡ್ ಫಾರ್ ಈಚ್ ಅದರ್ ಅಂತ ಕಮೆಂಟ್ ಮಾಡಿದ್ರೆ ಇನ್ನೂ ಹಲವರು ಹುಡುಗಿ ಕೈ ಕೊಟ್ರೋ ಅವಳು ಬೆಳೆಯಲಿ ಚೆನ್ನಾಗಿರಲಿ ಅಂತ ಹಾರೈಸುತ್ತಿರೋ ನೀವು ಗ್ರೇಟ್ ಅಂತ ರಕ್ಷಿತ್ ಶೆಟ್ಟಿ ಅವರನ್ನ ಕೊಂಡಾಡುತ್ತಿದ್ದಾರೆ.
ಜನರೇ ಎಚ್ಚರ.. ಜ.1ರಿಂದ ಬದಲಾಗಲಿವೆ ಈ ರೂಲ್ಸ್..
ಸದ್ಯ ರಷ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರು ಸಹ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ರಷ್ಮಿಕಾ ಅಲ್ಲು ಅರ್ಜುನ್ ನಟನೆಯ ತೆಲುಗಿನ ‘ಪುಷ್ಫ’ ಸಸಿನಿಮಾ, ಕನ್ನಡದ ಹೈ ಓಲ್ಟೇಜ್ ಸಿನಿಮಾವಾದ ಧ್ರುವ ಸರ್ಜಾ ಜೊತೆಗಿನ ‘ಪೊಗರು’, ತಮಿಳಿನ ಕಾರ್ತಿ ಜೊತೆಗೆ ‘ಸುಲ್ತಾನ್’ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರಗಳು ರಿಲೀಸ್ ಆಗೋದಷ್ಟೇ ಬಾಕಿಯಿವೆ. ಪ್ರಸ್ತುತ ಬಾಲಿವುಡ್ ನ ಮಿಷನ್ ಮಜ್ನು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾತೆ. ಇತ್ತ ರಕ್ಷಿತ್ ಶೆಟ್ಟಿ ಅವರು ಕೂಡ ‘ಚಾರ್ಲಿ 777’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಹೊರತಾಗಿ ಇನ್ನೂ ಹಲವು ಪ್ರಾಜೆಕ್ಟ್ ಗಳು ಅವರ ಕೈಯಲ್ಲಿ ಇವೆ. ಇತ್ತ ಅವರ ನಟನೆಯ ಕಿರಿಕ್ ಪಾರ್ಟಿ 2 ಸಿನಿಮಾ ಕೂಡ ಅನೌನ್ಸ್ ಆಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel