ರಶ್ಮಿಕಾ ಬಗ್ಗೆ ಕೆಟ್ಟ ಕಮೆಂಟ್ – ‘ಮೊದಲು ಮಾನವರಾಗೋಣ’ ಎಂದ ‘ಜೆಂಟಲ್ ಮೆನ್’..!
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಪರಭಾಷೆಗಳಲ್ಲಿ ಮಿಂಚುತ್ತಿರುವ ರಶ್ಮಿಕಾ ಫೇಮ್ ಗಿಂತ ಹೆಚ್ಚು ಟ್ರೋಲ್ ಗಳಿಂದಲೇ ಸುದ್ದಿಯಲ್ಲಿರುತ್ತಾರೆ.. ಎಷ್ಟು ಅಭಿಮಾನಿಗಳಿದ್ದಾರೋ ಅಷ್ಟೇ ಹೇಟರ್ಸ್ ಸಹ ಇದ್ದಾರೆ.. ರಶ್ಮಿಕಾ ಬಗ್ಗೆ ಯಾವುದೇ ಸುದ್ದಿ , ಹರಿದಾಡಿದ್ರೂ ಅಲ್ಲಿ ಅಭಿಮಾನಿಗಳು ಹಾಜರಿರುತ್ತಾರೋ ಇಲ್ವೋ ಹೇಟರ್ಸ್ ಟ್ರೋಲ್ ಗಳು ಮಿಸ್ ಆಗಲ್ಲ..
ಅದ್ರಲ್ಲೂ ರಶ್ಮಿಕಾ ರಕ್ಷಿತ್ ಶೆಟ್ಟಿ ಜೊತೆಗೆ ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿಕೊಂಡ ಮೇಲಂತೂ ರಶ್ಮಿಕಾ ಕಂಡ್ರೆ ರಕ್ಷಿತ್ ಫ್ಯಾನ್ಸ್ ಕೆಂಡಾಮಂಡಲರಾಗುತ್ತಾರೆ.. ಆದ್ರೆ ರಕ್ಷಿತ್ ಶೆಟ್ಟಿ ಬಳಿ ರಶ್ಮಿಕಾ ಬಗ್ಗೆ ಕೇಳಿದಾಗೆಲ್ಲಾ ರಕ್ಷಿತ್ ಶೆಟ್ಟಿ ಪ್ಯೂರ್ ಜೆಂಟಲ್ ಮೆನ್ ರೀತಿಯಲ್ಲೇ ಸೂಕ್ತವಾದ ುತ್ತರ ನೀಡ್ತಾರೆ..
ಇದೀಗ ರಶ್ಮಿಕಾ ಬಗ್ಗೆ ಕೆಟ್ಟ ಕಮೆಂಟ್ ಗಳನ್ನ ಮಾಡಿದವರಿಗೂ ಅದೇ ರೀತಿ ಉತ್ತರ ನೀಡಿದ್ದಾರೆ ಸಿಂಪಲ್ ಸ್ಟಾರ್.. ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾದ ಟೀಸರ್ ನಿನ್ನೆಯಷ್ಟೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿ ವೈರಲ್ ಆಗಿದೆ. ಇದೇ ವಿಷಯ ಮಾತನಾಡಲೆಂದು ರಕ್ಷಿತ್ ಶೆಟ್ಟಿ ಇಂದು ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು. ರಕ್ಷಿತ್ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಲೈವ್ ಆರಂಭಿಸುತ್ತಿದ್ದಂತೆ ಕೆಲವರು ರಶ್ಮಿಕಾ ಮಂದಣ್ಣ ಬಗ್ಗೆ ಕಮೆಂಟ್ ಮಾಡಲು ಆರಂಭಿಸಿದರು. ಕೆಲವರು ಕೆಟ್ಟ ಕಮೆಂಟ್‌ಗಳನ್ನು ಸಹ ಮಾಡಿದರು. ಆದರೆ ರಕ್ಷಿತ್ ಶೆಟ್ಟಿ ಅವರೆಲ್ಲರಿಗೂ ಸೂಕ್ತವಾಗಿಯೇ ಬುದ್ಧಿಮಾತು ಹೇಳಿದರು.
ಯಾವುದೇ ವ್ಯಕ್ತಿಗೆ ಅಗೌರವ ಮಾಡುವುದು ಬೇಡ. ನಾವು ನಮ್ಮ ಬಗ್ಗೆಯೇ ಅಸಹ್ಯ ಪಟ್ಟುಕೊಳ್ಳುವಂಥಹಾ ಕಮೆಂಟ್ ಅನ್ನು ಬೇರೆಯವರ ಬಗ್ಗೆ ಸಹ ಮಾಡಬಾರದು. ಎಲ್ಲರ ಬಳಿ ಮನವಿ ಮಾಡಿಕೊಳ್ಳುವುದೇನೆಂದರೆ ಮೊದಲು ಮಾನವರಾಗೋಣ.
ಎಲ್ಲರಿಗೂ ಗೌರವ ಕೊಡೋಣ. ಎಲ್ಲರಿಗೂ ಅವರದ್ದೇ ಆದ ಜೀವನ ಇದೆ. ಇಲ್ಲಿ ಕಮೆಂಟ್ ಸೆಕ್ಷನ್ ಅಲ್ಲಿ ನಾನು ಒಳ್ಳೆಯ ಕಮೆಂಟ್ಸ್ ನೋಡಲು ಇಷ್ಟಪಡುತ್ತೀನಿ. ನಮ್ಮ ಸಿನಿಮಾ ಬಗ್ಗೆ ಕಮೆಂಟ್ಸ್ ನೋಡಲು ಇಷ್ಟಪಡುತ್ತೀನಿ ಎಂದಿದ್ದಾರೆ.