6- 7 ತಿಂಗಳುಗಳ ನಂತರ ಕೊನೆಗೆ ಚಿತ್ರಮಂದಿರಗಳ ತೆರವಿಗೆ ಷರತ್ತುಗಳ ಅನ್ವಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಇದರ ಬೆನ್ನಲ್ಲೇ ಅನೇಕ ಸಿನೆಮಾಗಳು ತೆರಗಪ್ಪಳಿಸಲು ಸಜ್ಜಾಗಿವೆ.
ಅನ್ ಲಾಕ್ ಮಾರ್ಗಸೂಚಿ 5.0 ಅನ್ವಯ ಅಕ್ಟೋಬರ್ 15 ರಿಂದ ಶೇಕಡಾ 50 ರಷ್ಟು ಜನರನ್ನು ಒಳಗೊಂಡಂತೆ ಚಿತ್ರಮಂದಿರಗಳು ತೆರೆಯಬಹುದಾಗಿದೆ.

ಇನ್ನೂ ಸರ್ಕಾರ ಆದೇಶ ಪಾಸ್ ಮಾಡ್ತಿದ್ದಂತೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ನೂತನ ಚಿತ್ರದ ರಿಲೀಸ್ ಡೇಟ್ ಘೋಷಿಸಿದ್ದಾರೆ.
ಇನ್ನೂ ಕೊರೊನಾ ಲಾಕ್ ಡೌನ್ ಮುಗಿದು ಚಿತ್ರಮಂದಿರಗಳ ತೆರವಿಗೆ ಅನುಮತಿ ಸಿಕ್ಕಿರುವ ಬೆನ್ನಲ್ಲೇ ಲಾಕ್ಡೌನ್ ಬಳಿಕ ಬಿಡುಗಡೆಯಾಗಗಲಿರುವ ಮೊದಲ ಸಿನಿಮಾ ‘ಕೊರೊನಾ ವೈರಸ್’..
ಎಸ್ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದು, ಲಾಕ್ಡೌನ್ ಬಳಿಕ ಮೊದಲ ಸಿನಿಮಾ ಎಂದು ಹೇಳಿದ್ದಾರೆ.
ಹೀಗಾಗಿಯೇ ಅಕ್ಟೋಬರ್ 15 ರಂದೇ ಬಿಡುಗಡೆಯಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
ಆದರೆ ನಿಖರವಾಗಿ ಬಿಡುಗಡೆ ದಿನಾಂಕ ಹೇಳಿಲ್ಲ.. ಈ ಚಿತ್ರಕ್ಕೆ ಅಗಸ್ತ್ಯ ಮಂಜು ಆಕ್ಷನ್ ಕಟ್ ಹೇಳಿದ್ದು, ರಾಮಗೋಪಾಲ್ ವರ್ಮಾ ಬಂಡವಾಳ ಹೂಡಿದ್ದಾರೆ.








