25 ರೂ ಪಾವತಿಸಿದರೆ ಪವರ್ಸ್ಟಾರ್ ಚಿತ್ರದ ಟ್ರೇಲರ್ ತೋರಿಸುವುದಾಗಿ ಹೇಳಿ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಅವರು ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದರು. ಅಲ್ದೇ 150 ರೂಪಾಯಿಯನ್ನು ಮುಂಗಡವಾಗಿ ಬುಕಿಂಗ್ ಮಾಡಿದರೆ ಸಿನಿಮಾ ತೋರಿಸುವುದಾಗಿ ಹೇಳಿಕೊಂಡಿದ್ದರು. ಅದ್ರಂತೆ ಇಂದು ಆರ್ಜಿವಿ ವರ್ಲ್ಡ್ ಥಿಯೇಟರ್ನಲ್ಲಿ ಚಿತ್ರದ ಟ್ರೇಲರ್ ಅಪ್ಲೋಡ್ ಆಗಬೇಕಿತ್ತು.ಆದ್ರೆ ಅದಕ್ಕೂ ಮುನ್ನವೇ ಚಿತ್ರದ ಟ್ರೇಲರ್ ಲೀಕ್ ಆಗಿದ್ದು, ರಾಮ್ ಗೋಪಾಲ್ ವರ್ಮಾ ಅವರ ಪ್ಲಾನ್ ತಲೆಬುಡವಾಗಿದೆ.
ಹೀಗಾಗಿ ರಾಮ್ ಗೋಪಾಲ್ ವರ್ಮಾ ಅವರು ತಮ್ಮದೇ ಯೂಟ್ಯೂಬ್ನಲ್ಲಿ ಇದರ ಲಿಂಕ್ ಶೇರ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ನಿರ್ದೇಶಕರು ಟ್ರೇಲರ್ ವೀಕ್ಷಣೆಗೆ ಮುಂಚಿತವಾಗಿ ಸಬ್ಸ್ಕ್ರೈಬ್ ಆಗಿದ್ದ ವೀಕ್ಷಕರಿಗೆ ಹಣವನ್ನು ಮರಳಿಸುವುದಾಗಿಯೂ ತಿಳಿಸಿದ್ದಾರೆ. ಜು.25ಕ್ಕೆ ಚಿತ್ರ ಆರ್ಜಿವಿ ವರ್ಲ್ಡ್ ಥಿಯೇಟರ್ ಆಪ್ ನಲ್ಲಿ ರಿಲೀಸ್ ಆಗಲಿದೆ. ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ ರಾಜಕೀಯ ಕಥೆಯನ್ನೇ ಸಿನಿಮಾ ಮಾಡಲಾಗಿದೆ.








