Ram gopal varma : ಅಪ್ಸರಾ ರಾಣಿಯನ್ನ ಡೇಂಜರಸ್ ಬ್ಯೂಟಿ ಎಂದು ಹೊಗಳಿದ ಆರ್ ಜಿವಿ
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಯಾರು ಏನು ಅಂದ್ರೂ ತಲೆ ಕಡೆಸಿಕೊಳ್ಳದ ರಾಮ್ ಗೋಪಾಲ್ ವರ್ಮಾ ಒಂದು ರೀತಿಯಾಗಿ ಸೋಲೋ ಮ್ಯಾನ್ ಇದ್ದಂತೆ.
ತಮಗೆ ಇಷ್ಟವಾಗಿದ್ದನ್ನೇ ಮಾಡುತ್ತಾ ಸುದ್ದಿಯಾಗುತ್ತಲೇ ಇರುತ್ತಾರೆ. ಆತ ಮಾಡುವ ಟ್ವೀಟ್ ಎಷ್ಟೋ ಜನರ ನಿದ್ರೆ ಕದಿಯುತ್ತೆ… ಮಾಡೆಲ್ಗಳ ಜತೆ ಬಾರ್ ನಲ್ಲಿ ಪಾರ್ಟಿ ಮಾಡುವುದು ಮತ್ತು ತಮ್ಮದೇ ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಜತೆ ಪಬ್ ಗಳಲ್ಲಿ ತಮ್ಮಿಷ್ಟ ಬಂದಂತೆ ಇರೋದು.. ಟ್ರೋಲ್ ಆಗೋದು ಇದೆಲ್ಲಾ ಅವರಿಗೆ ಅಭ್ಯಾಸ ಹಾಗೂ ಹವ್ಯಾಸವೂ ಆಗಿಬಿಟ್ಟಿದೆ..
https://twitter.com/_apsara_rani/status/1502505954247528449
ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ರಾಮ್ ಗೋಪಾಲ್ ವರ್ಮಾ ಈ ಬಾರಿ ನಟಿ ಅಪ್ಸರಾ ರಾಣಿಯನ್ನು ಹೊಗಳಿದ್ದಾರೆ..
ಅಪ್ಸರಾ ರಾಣಿ ಟ್ವಿಟ್ಟರ್ ನಲ್ಲಿ ಒಂದು ವಿಡಿಯೋವನ್ನ ಹಂಚಿಕೊಂಡಿದ್ದರು.. ಇದೇ ವಿಡಿಯೋಗೆ ಕಾಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿರುವ ರಾಮ್ ಗೋಪಾಲ್ ವರ್ಮಾ , ಡೇಂಜರೆಸ್ ಹುಡುಗಿಯ ನೋಟವು, ಅಪಾಯಕಾರಿ ಅಲ್ಲವೆಂದು ಹೇಳುತ್ತದೆ ಎಂದಿದ್ಧಾರೆ.. ಈ ವಿಡಿಯೊದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ , ಕಾಣಿಸಿಕೊಂಡಿರುವ ಅಪ್ಸರಾ… ಪಡ್ಡೆ ಹೈಕಳ ನಿದ್ದೆಗೆಡಿಸಿದ್ದಾರೆ.
ಅಪ್ಸರಾ ರಾಣಿಯು ಬೆಡ್ ಮೇಲೆ ಅರೆಬೆತ್ತಲೆಯಾಗಿ ಮಲಗಿಕೊಂಡು ಮಾದಕ ನೋಟದೊಂದಿಗೆ ಗುಲಾಬಿಯ ಪಕಳೆಗಳನ್ನು ಎಸೆಯುತ್ತಾ ಮಾದಕ ನೋಟ ಬೀರಿರುವ ವಿಡಿಯೋ ಇದಾಗಿದೆ.
ಇದೇ ವಿಡಿಯೋಗೆ ಆರ್ ಜಿ ವಿ ಈ ರೀತಿಯಾದ ಕಮೆಂಟ್ ಮಾಡಿದ್ದಾರೆ.. ಅಷ್ಟೇ ಅಲ್ಲ ಮುಳ್ಳನ್ನು ಹಿಡಿಯಲು ಧೈರ್ಯವಿಲ್ಲದವರು ಹೂವಿನ್ನ ಹಂಬಲಿಸಬಾರದು ಎಂದಿದ್ದಾರೆ.









