ನಾನಲ್ಲ ಕಚ್ಚಿದ್ದು ನನ್ನ ಕಾರ್ ಡ್ರೈವರ್, ಸಲ್ಮಾನ್ ಕಾಲೆಳೆದ ವರ್ಮ…
ರಾಮ್ ಗೋಪಾಲ್ ವರ್ಮ್…. ಅನಿಸಿದ್ದನ್ನ ಅನಿಸಿದಂಗೆ ಹೇಳುವ ಮನುಷ್ಯ, ಯಾವುದಕ್ಕೂ ಡೋಂಟ್ ಕೇರ್ ಕ್ಯಾರಕ್ಟರ್ ಆಸಾಮಿ ಇಂಥ ರಾಮ್ ಗೋಪಾಲ್ ವರ್ಮ ಸಲ್ಮಾನ್ ಖಾನ್ ವಿಷಯಕ್ಕೆ ಸಂಬಂಧಿಸಿದ ಪೋಸ್ಟ್ ಒಂದನ್ನ ಪೋಸ್ಟ್ ಮಾಡಿದ್ದು ಸಖತ್ ವೈರಲ್ ಅಷ್ಟೆ ಅಲ್ಲ ಚರ್ಚೆಗೆ ಗ್ರಾಸವಾಗಿದೆ.
ಟ್ವೀಟರ್ ನಲ್ಲಿ ಸದಾ ಆಕ್ಟೀವ್ ಇರುವ ವರ್ಮ ವರ್ತಮಾನದ ಸುದ್ದದಿಗಳಿ ತನ್ನದೇ ಆದ ಪ್ರತಿಕ್ರಿಯೇಗಳನ್ನ ಕೊಡುತ್ತಲೆ ಇರುತ್ತಾರೆ. ಕೆಲವೊಮ್ಮೆ ಇಂಥ ಪ್ರತಿಕ್ರಿಯೆಗಳು ಸಾಕಷ್ಟು ವಿವಾದವನ್ನು ಉಂಟು ಮಾಡುತ್ತವೆ. ಆದ್ರೆ ವರ್ಮ ವಿವಾದಗಳಿಗೆಲ್ಲ ಡೋಂಟ್ ಕೇರ್ ,
ನಟ ಸಲ್ಮಾನ್ ಖಾನ್ ಗೆ ಇತ್ತೀಚೆಗೆ ಹಾವಿ ಕಚ್ಚಿದ್ದು ನಿಮಗೆಲ್ಲ ತಿಳಿದೆ ಇದೆ. ಮುಂಬೈನ ಪನ್ವೆಲ್ ಫಾರ್ಮ್ ಹೌಸ್ ನಲ್ಲಿ ಸಲ್ಮಾನ್ ಹಾವು ಕಚ್ಚಿಸಿಕೊಂಡಿದ್ದರು. ಇದು ಬಾಲಿವುಡ್ ನಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು. ಎಲ್ಲರು ಸಲ್ಮಾನ ಹಾರೈಕೆಗೆ ಟ್ವೀಟ್ ಮಾಡಿದ್ರೆ ವರ್ಮ ಸ್ವಲ್ಪ ಖಾರವಾಗಿ ಟ್ವೀಟ್ ಮಾಡಿದ್ದಾರೆ.
ಅದು ಹಾವು ಕೋರ್ಟ್ ನ ಕಟಕಟೆಯ ಮೇಲೆ ನಿಂತುಕೊಂಡು “ಕಚ್ಚಿದ್ದು ನಾನಲ್ಲ ನನ್ನ ಡ್ರೈವರ್” ಎಂದು ಹೇಳುವ ಕ್ಯಾಪ್ಶನ್ ಹಾಕಿಕೊಂಡಿದ್ದಾರೆ. ಇಂಥಹದೊಂದು ವಿಡಂಬನಾತ್ಮಕ ಕಾರ್ಟೂನ್ ಅನ್ನ ವರ್ಮ ಹಂಚಿಕೊಂಡಿದ್ದಾರೆ.
— Ram Gopal Varma (@RGVzoomin) December 29, 2021
ಈ ಕಾರ್ಟೂನಿನ ಹಿಂದೆ ಒಂದು ಹಿನ್ನಲೆ ಕೂಡ ಇದೆ. 2002 ರಲ್ಲಿ ಸಲ್ಮಾನ್ ಮೇಲೆ ಹಿಟ್ ಅಂಡ್ ರನ್ ಕೇಸ್ ದಾಖಲಾಗಿತ್ತು. ಕುಡಿದು ವಾಹನ ಚಲಾಯಿಸಿ ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಕಾರು ಹತ್ತಿಸಿದ ಆರೋಪ ಹೊತ್ತಿಕೊಂಡಿದ್ದರು. ಇದರಲ್ಲಿ ಸಲ್ಮಾನ್ ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅಂತಿಮವಾಗಿ ಕಾರು ಚಲಾಯಿಸಿದ್ದು ಡ್ರೈವರ್ ಎಂದು ಸಾಬೀತಾದ ಮೇಲೆ ಸಲ್ಮಾನ್ ಬಚಾವ್ ಆಗಿದ್ದರು.. ಈ ಹಿನ್ನಲೆಯನ್ನ ಇಟ್ಟುಕೊಂಡು ರಚಿಸಿರುವ ಕಾರ್ಟೂನ್ ರಾಮ್ ಗೊಪಾಲ್ ವರ್ಮ ಸಲ್ಮಾನ್ ಖಾನ್ ಕಾಲೆಳದಿದ್ದಾರೆ.








