ರಾಮಮಂದಿರ | ಮಾಜಿ ಮುಖ್ಯಮಂತ್ರಿಗಳಿಗೆ ಗುಮ್ಮಿದ ಬಿಜೆಪಿ ರಾಜ್ಯಾಧ್ಯಕ್ಷ
ವಿಜಯಪುರ : ರಾಮ ಮಂದಿರಕ್ಕೆ ದೇಣಿಗೆ ವಸೂಲಿ ವಿಚಾರವಾಗಿ ಮಾಜಿ ಸಿಎಂಗಳಾದ ಹೆಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ದೊಡ್ಡವರಾಗಿ ಇಂಥಹ ಸಣ್ಣತನದ ಮಾಡು ಆಡಬಾರದು. ಅಂತ ವ್ಯಕ್ತಿ ಬಾಯಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ರಾಮ ಏನು? ರಾಮ ಮಂದಿರ ಏನು? ಗೌರವ ಇದ್ರೆ ಕೊಡಿ ಎಂದರು. ಇನ್ನು ವಿವಾದಾತ್ಮಕ ಸ್ಥಳದಲ್ಲಿ ಕಟ್ಟುತ್ತಿರುವ ರಾಮ ಮಂದಿರಕ್ಕೆ ಹಣ ನೀಡಲ್ಲ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಕಟೀಲ್, ರಾಮನ ಮೇಲೆ ಗೌರವ ಉಂಟು, ಸುಪ್ರೀಂ ಕೋರ್ಟ್ ಮೇಲೆ ಇಲ್ವಾ..? ಸುಪ್ರೀಂ ಕೋರ್ಟ್ ಹೇಳಿರೋದು, ಮೋದಿ ಹೇಳಿಲ್ಲ. ವಿಶ್ವಹಿಂದೂ ಪರಿಷತ್ ಕೂಡ ಹೇಳಿದ್ದಲ್ಲ, ಸುಪ್ರೀಂ ಕೋರ್ಟೇ ಟ್ರಸ್ಟ್ ರಚನೆ ಮಾಡಿರೋದು. ಸುಪ್ರೀಂ ಕೋರ್ಟ್ ಹಾಗೂ ಸಂವಿಧಾನದ ಮೇಲೆ ಯಾರಿಗೆ ಗೌರವ ಇಲ್ಲವೋ ಅವರು ಇಂಥ ಮಾತು ಹೇಳ್ತಾರೆ ಎಂದರು.
ಇದೇ ವೇಳೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಗೆ ನೊಟೀಸ್ ವಿಚಾರವಾಗಿ ಮಾತನಾಡಿ, ಯತ್ನಾಳ ಅವರಿಗೆ ಶಿಸ್ತು ಸಮೀತಿ ನೊಟೀಸ್ ಕಳಿಸಿದೆ.
ಅವರಿಗೆ ನೊಟೀಸ್ ಬಂದಮೇಲೆ ಅವರು ಉತ್ತರ ಕೊಡ್ತಾರೆ ಎಂದರು. ಈಶ್ವರಪ್ಪ, ಶ್ರೀರಾಮುಲು ಮೀಸಲಾತಿ ಹೋರಾಟ ವಿಚಾರವಾಗಿ ಮಾತನಾಡಿ, ಎಲ್ಲವನ್ನೂ ಪಕ್ಷ ಗಮನಿಸುತ್ತಿದೆ, ಯಾವ ಸಂದರ್ಭದಲ್ಲಿ ಏನು ತೀರ್ಮಾನ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳಲಾಗುತ್ತದೆ. ನಾಯಕರು ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳಬಾರದು ಎಂದು ಸೂಚನೆ ಇಲ್ಲ. ಆದರೆ ಎಲ್ಲರನ್ನೂ ಕರೆದು ಮಾತನಾಡಲಾಗುತ್ತೆ. ಎಲ್ಲ ಸಮಾಜಗಳಿಗೆ ಗೌರವ ಕೊಡುವ ಹಾಗೂ ನ್ಯಾಯ ಕೊಡುವ ಕೆಲಸ ಆಗುತ್ತೆ.ಅದರ ಬಗ್ಗೆ ಸಿಎಂ, ಸರ್ಕಾರ, ಪಾರ್ಟಿ ಎಲ್ಲವನ್ನೂ ಚರ್ಚೆ ಮಾಡುತ್ತದೆ ಎಂದು ತಿಳಿಸಿದರು.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564