ನಟ ರಾಮ್ ಪೋತಿನೇನಿಗೆ ಒಲಿದು ಬಂದ ಕಂಕಣ ಭಾಗ್ಯ – ಶೀಘ್ರದಲ್ಲೇ ಮದುವೆ…
ತೆಲುಗು ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ಚಾಕೊಲೇಟ್ ಬಾಯ್ ರಾಮ್ ಪೋತಿನೇನಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಾಮ್ ಶೀಘ್ರದಲ್ಲೇ ಪ್ರೇಮ ವಿವಾಹವಾಗಲಿದ್ದಾತೆ ಎನ್ನುವ ಸುದ್ದಿ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ.
ನಮ್ಮ ಇಸ್ಮಾರ್ಟ್ ರಾಮ್ ಪೋತಿನೇನಿ ತನ್ನ ಹೈಸ್ಕೂಲ್ ಗೆಳತಿಯನ್ನ ಬಾಳಸಂಗಾತಿಯಾಗಿ ವರಿಸಲಿದ್ದಾರೆ ಎಂದು ಮಾಹಿತಿ ಇದೆ. ಇವರಿಬ್ಬರ ಪ್ರೀತಿಗೆ ಎರಡೂ ಮನೆಯವರು ಒಪ್ಪಿಗೆ ಸೂಚಿಸಿದ್ದರಿಂದ… ರಾಮ್ ಅವರ ಮನೆಯಲ್ಲಿ ಮದುವೆ ತಯಾರಿಗಳು ಜೋರಾಗಿ ನಡೆಯುತ್ತಿವೆ.
ಈ ವರ್ಷದ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಮದುವೆ ಜರುಗುವ ನಿರೀಕ್ಷೆಯಿದೆ. ರಾಮ್ ಅವರ ಕುಟುಂಬ ಸದಸ್ಯರು ಮದುವೆ ದಿನಾಂಕದ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದ್ದಾರೆ. ರಾಮ್ ಮತ್ತು ಆತನ ಗೆಳತಿ ಶಾಲಾ ಸಹಪಾಠಿಗಳಾಗಿದ್ದು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ರಾಮ್ ನಟಿಸಿರುವ ‘ವಾರಿಯರ್’ ಚಿತ್ರ ಜುಲೈ 14 ರಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಯಾದ ನಂತರ ಅವರ ನಿಶ್ಚಿತಾರ್ಥ ನಡೆಯಲಿದೆ. ಆ ನಂತರ ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ಮದುವೆ ನಡೆಯಲಿದೆ. ಆದರೆ ಈ ವಿಚಾರವನ್ನ ಕುಟುಂಬಸ್ಥರು ಇನ್ನೂ ಧೃಡಪಡಿಸಿಲ್ಲ.








