ಮಂಗಳೂರಿನಲ್ಲಿ ಸಂಭ್ರಮದ ರಂಜಾನ್ ಆಚರಣೆ
ಮಂಗಳೂರು: ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ ಹಬ್ಬವನ್ನು ದೇಶದ್ಯಾಂತ ಸಂಬ್ರಮದಿಂದ ಆಚರಿಸಿದರು.
ಒಂದು ತಿಂಗಳ ಕಾಲ ಉಪವಾಸ ವೃತ ಆಚರಿಸಿದ ಮುಸ್ಲಿಂ ಬಾಂಧವರು ಇಂದು ದಕ್ಷಿಣ ಕನ್ನಡ ಜಲ್ಲೆಯಲ್ಲಿ ಈದ್ ಉಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ರಂಜಾನ್ ತಿಂಗಳ ಚಂದ್ರ ದರ್ಶನದೊಂದಿಗೆ ಆರಂಭವಾಗುವ ಉಪವಾಸವು ಶಾವಾಲ್ ತಿಂಗಳ ಚಂದ್ರ ದರ್ಶನದೊಂದಿಗೆ ಕೊನೆಗೊಂಡಿದೆ. ಶಾವಾಲ್ ತಿಂಗಳ ಮೊದಲ ದಿನವಾದ ಇಂದು ‘ಈದ್ ಉಲ್ ಫಿತರ್’ ಹಬ್ಬವೆಂದು ಆಚರಿಸಿದರು.
ಮಂಗಳೂರಿನ ಬಾವುಟ ಗುಡ್ಡದಲ್ಲಿರುವ ಈದ್ಗಾ ಮಸೀದಿಯಲ್ಲಿ ಮುಸ್ಲಿಮರು ಸಾಮೂಹಿಕ ನಮಾಜ್ ಮಾಡಿದರು. ಮಸೀದಿಯಲ್ಲಿ ಈದ್ ಪ್ರಾರ್ಥನೆ ಮಾಡಿದ ಬಳಿಕ ಎಲ್ಲರೂ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.









