ಎರೆಡೆರೆಡು ಬಾರಿ ಸೀಲ್ ಡೌನ್ ಆಗಿದ್ದ ರಾಮನಗರ ಕಾರಾಗೃಹ ಸತತ ೪ ತಿಂಗಳ ಬಳಿಕ ತೆರವುಗೊಂಡಿದೆ. ಕಳೆದ ೪ ತಿಂಗಳ ಹಿಂದೆ ಪಾದರಾಯನಪುರ ಪ್ರಕರಣದ ಆರೋಪಿಗಳನ್ನು ಕಾರಾಗೃಹಕ್ಕೆ ಕರೆತಂದ ಸಂದರ್ಭದಲ್ಲಿ ಜೈಲ್ ನ ವಾರ್ಡನ್ ಗೆ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕಾರಾಗೃಹವನ್ನು ೨ನೇ ಬಾರಿಗೆ ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಕಾರಾಗೃಹ ಸೀಲ್ ಡೌನ್ ಮುಕ್ತವಾಗಿದ್ದು, ಹೊಸದಾಗಿ ಐವರು ಆರೋಪಿಗಳನ್ನು ಕಂಬಿ ಹಿಂದೆ ಕಳುಹಿಸಲಾಗಿದೆ.
ಮಾರ್ಚ್ 22ರಂದು ಪಾದರಾಯನಪುರ ಗಲಭೆ ಪ್ರಕರಣದ 121 ಆರೋಪಿಗಳನ್ನ ರಾಮನಗರ ಜೈಲಿಗೆ ಶಿಫ್ಟ್ ಮಾಡಿದ್ದರು. ಇದಾದ ಎರಡೇ ದಿನದಲ್ಲಿ ಅಲ್ಲಿದ್ದವರಲ್ಲಿ ಐವರಿಗೆ ಪಾಸಿಟಿವ್ ಕಾಣಿಸಿಕೊಂಡಿತ್ತು. ಬಳಿಕ ಮತ್ತೆ ವಾಪಸ್ ಬೆಂಗಳೂರಿಗೆ ಆರೋಪಿಗಳನ್ನು ಶಿಫ್ಟ್ ಮಾಡಲಾಗಿತ್ತು. ಅದಕ್ಕೂ ಮೊದಲು ರಾಮನಗರ ಜೈಲಿನಲ್ಲಿದ್ದ 177 ಮಂದಿ ವಿಚಾರಣಾಧೀನ ಖೈದಿಗಳು ಬೆಂಗಳೂರಿಗೆ ಶಿಫ್ಟ್ ಮಾಡಿದ್ದರು.
ವಾಲ್ಮೀಕಿ ನಿಗಮದ ಹಣ ತಿಂದಾಗ ಸತೀಶ್ ಜಾರಕಿಹೊಳಿ ಮೌನವಾಗಿದ್ದೇಕೆ ರಾಜುಗೌಡ ನೇರ ಪ್ರಶ್ನೆ
ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಹುದ್ದೆಯ ಚರ್ಚೆ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಗುರಿಯಾಗಿಸಿ ಮಾಜಿ...








