‘ರಾಮಾಯಣ’ ದಿಂದ ‘ಕ್ರಿಶ್’ ಔಟ್..! ಹೃತಿಕ್ ಜಾಗಕ್ಕೆ ‘ಟಾಲಿವುಡ್ ಪ್ರಿನ್ಸ್’..!
ಹೃತಿಕ್ ರೋಷನ್ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದ ಬಹುನಿರೀಕ್ಷೆಯ ರಾಮಾಯಣ ಸಿನಿಮಾ ಸೆಟ್ಟೇರುವ ಮುನ್ನವೇ ಭಾರೀ ಸದ್ದು ಮಾಡಿತ್ತು, ಆದ್ರೆ ಇದೀಗ ಹೃತಿಕ್ ರೋಷನ್ ಅವರು ರಾಮಾಯಣ ಸಿನಿಮಾದಿಂದ ಹಿಂದೆ ಸರಿದಿದ್ದು, ಅವರ ಜಾಗಕ್ಕೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಎಂಟ್ರಿಯಾಗ್ತಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ.
ಸುಮಾರು 500 ಕೋಟಿ ಬಜೆಟ್ ನಲ್ಲಿ 3ಡಿಯಲ್ಲಿ ನಿರ್ಮಾಣವಾಗ್ತಿರುವ ರಾಮಾಯಣ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇದೆ. ಕ್ರಿಶ್ ಸಿನಿಮಾ ಖ್ಯಾತಿಯ ಹೃತಿಕ್ ಸಿನಿಮಾದಲ್ಲಿ ರಾಮನ ಅವತಾರದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನೋ ಕ್ಯೂರಿಯಾಸಿಟಿ ಇತ್ತು. ಅಭಿಮಾನಿಗಳು ಕಾಯುತ್ತಿದ್ದರು.
ಆದ್ರೆ ಈಗ ಹೃತಿಕ್ ಸಿನಿಮಾದಿಂದ ಹಿಂದೆ ಸರಿಯಲಿದ್ದಾರೆ ಅನ್ನೋ ಸುದ್ದಿ ಸಹಜವಾಗಿಯೇ ಫ್ಯಾನ್ಸ್ ಗೆ ನಿರಾಸೆಯುಂಟು ಮಾಡಿದೆ. ಮಧು ಮಂತೇನಾ ನಿರ್ಮಾಣದಲ್ಲಿ ಮೂಡಿಬರುತ್ತಿರುವ ರಾಮಾಯಣಕ್ಕೆ ರಾಮನ ಪಾತ್ರಕ್ಕೆ ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಅವರನ್ನು ಚಿತ್ರದ ಮೇಕರ್ಸ್ ಸಂಪರ್ಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ದೇ ಮತ್ತೊಂದು ಮೂಲಗಳ ಪ್ರಕಾರ ಸಿನಿಮಾಗಾಗಿ ಮೊದಲು ಪ್ರಭಾಸ್ ಅವರನ್ನೂ ಕೂಡ ಸಂಪರ್ಕಿಸಲಾಗಿತ್ತು ಎನ್ನಲಾಗಿದೆ. ಆದ್ರೆ ಪ್ರಬಾಸ್ ಅವರು ರಾಮಾಯಣ ಆಧರಿತ ಮತ್ತೊಂದು ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾದಲ್ಲಿ ರಾಮನಾಗಿ ನಟಿಸುತ್ತಿದ್ದಾರೆ. ಹೀಗಾಗಿ ಈ ಸಿನಿಮಾಗೆ ಅವರು ಗ್ರೀನ್ ಸಿಗ್ನಲ್ ನೀಡಿಲ್ಲ ಎನ್ನಲಾಗಿದೆ.
‘ವಕೀಲ್ ಸಾಬ್’ ಮುಂದೆ ‘ಬಾಹುಬಲಿ’ಯ ರೆಕಾರ್ಡ್ ಪೀಸ್ ಪೀಸ್..!
ದಿ ಬಿಗ್ ಬುಲ್ ನಲ್ಲಿ ಹರ್ಷ ಮೆಹ್ತಾವನ್ನು ವೈಟ್ವಾಶ್ ಮಾಡಲು ಯಾವುದೇ ಪ್ರಯತ್ನವಿಲ್ಲ – ಅಭಿಷೇಕ್ ಬಚ್ಚನ್
‘ವಕೀಲ್ ಸಾಬ್’ ಮುಂದೆ ‘ಬಾಹುಬಲಿ’ಯ ರೆಕಾರ್ಡ್ ಪೀಸ್ ಪೀಸ್..!
ಚಿಕ್ಕಪ್ಪನ ಮಗನನ್ನೇ ಮದುವೆಯಾದ ಮಗಳ ಫೋಟೋದ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ..!