ನವದೆಹಲಿ: ಕೊರೊನಾ ಭೀತಿ ಹಿನ್ನೆಲೆ ದೇಶವನ್ನೇ 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಮನೆಗಳಿಂದ ಯಾರೂ ಹೊರಬರದಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕೈ ಮುಗಿದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಜನರೆಲ್ಲಾ ಮನೆಗಳಿಂದ ಹೊರ ಬರದ ಪರಿಸ್ಥಿತಿಯಲ್ಲಿದ್ದು, ಮನೆಯಲ್ಲೇ ಕುಳಿತು ಸಮಯಕಳೆಯಲಾಗದೆ ಒದ್ದಾಡುತ್ತಿದ್ದಾರೆ. ಹೀಗಾಗಿ ಸರ್ಕಾರವೇ ಡಿಡಿಯಲ್ಲಿ ರಾಮಾಯಣ ಸೀರಿಯಲ್ ಅನ್ನ ರೀ ಟೆಲಿಕಾಸ್ಟ್ ಮಾಡಲು ನಿರ್ಧರಿಸಿದೆ. ಒಂದು ಕಾಲದಲ್ಲಿ ರಾಮಾಯಣ ಸೀರಿಯಲ್ ನೋಡೋಕೆ ಜನರು ಕಾದು ಕುಳಿತಿರುತ್ತಿದ್ದರು. ಯಾವ ಮನೆಯಲ್ಲಿ ಟಿವಿ ಇರ್ತಿತ್ತೋ ಅಲ್ಲಿ ಜಮಾಯಿಸುತ್ತಿದ್ರು.ಸೀರಿಯಲ್ ಪ್ರಸಾರವಾಗುತ್ತಿದ್ದಂತೆ ದೇಶವೇ ಸ್ತಬ್ಧವಾಗುತ್ತಿತ್ತು. ಜನರು ಮನೆಯಲ್ಲೇ ಕುಳಿತು ರಾಮಾಯಣವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಈ ಕಾರಣಕ್ಕಾಗಿ ಮತ್ತೆ
ಇದೀಗ ಆ ಸೀರಿಯಲ್ ಅನ್ನ ರೀ ಟೆಲಿಕಾಸ್ಟ್ ಮಾಡುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಾರ್ವಜನಿಕರ ಬೇಡಿಕೆಯ ಮೇರೆಗೆ, ನಾಳೆ, ಅಂದ್ರೆ ಮಾರ್ಚ್ 28ರ ಶನಿವಾರದಿಂದ ಡಿಡಿ ನ್ಯಾಷನಲ್‌ನಲ್ಲಿ, ಬೆಳಿಗ್ಗೆ 9 ರಿಂದ-10 ರವರೆಗೆ ಒಂದು ಎಪಿಸೋಡ್ ಮತ್ತು ರಾತ್ರಿ 9 ರಿಂದ 10 ರವರೆಗೆ ಮತ್ತೊಂದು ಎಪಿಸೋಡ್ ಪ್ರಸಾರ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಜೀವನದಲ್ಲಿ ಮನಸ್ಸಿಗೆ ಶಾಂತಿ ಇಲ್ಲ ಎಂದು ಹೇಳುವವರು ಈ ಕಥೆಯನ್ನು ಓದಿ, ಶಾಂತಿ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿಯುತ್ತದೆ.
ಮನಸ್ಸಿನ ಶಾಂತಿಗೆ ದಾರಿ ಜೀವನದಲ್ಲಿ ಮನಸ್ಸಿನ ಶಾಂತಿಯನ್ನು ಹುಡುಕುತ್ತಾ ಅಲೆದಾಡುವ ಅನೇಕ ಜನರು ನಮ್ಮ ನಡುವೆ ಇದ್ದಾರೆ. ಮನಸ್ಸಿನ ಶಾಂತಿ ಎಲ್ಲಿದೆ? ಒಬ್ಬ ಋಷಿ ತನ್ನ ಶಿಷ್ಯನಿಗೆ...








