ಹಾಸನ: ನೇಣು ಬಿಗಿದ ಸ್ಥಿತಿಯಲ್ಲಿ ಬಾಳೆಹೊನ್ನೂರು ರಂಭಾಪುರಿ ಶಾಖಾ ಮಠದಸ್ವಾಮೀಜಿ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಮೃತದೇಹ ಪತ್ತೆಯಾಗಿದ್ದು ಆತ್ಮಹತ್ಯೆಗೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಹಾಸನ ಜಿಲ್ಲೆ ಆಲೂರು ತಾಲೂಕಿನ ಕಾರ್ಜುವಳ್ಳಿ ಹಿರೇಮಠದ ನಿವಾಸದಲ್ಲಿ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಮೃತದೇಹದ ಪಕ್ಕ ಪತ್ತೆಯಾದ ಚೀಟಿಯಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರಹವಿದೆ.
ಕಳೆದ 2006 ನೇ ಇಸವಿಯಿಂದ ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾಗಿದ್ದ ಶಂಭುಲಿಂಗ ಸ್ವಾಮೀಜಿ, 2006ರಿಂದ ಮಠ ಅಭಿವೃದ್ಧಿಗೆ ತೀವ್ರ ಶ್ರಮವಹಿಸಿದ್ದರು. 15 ಎಕರೆ ಪಾಳುಬಿದ್ದ ಮಠದ ಭೂಮಿಯನ್ನು ಅಭಿವೃದ್ಧಿಪಡಿಸುವ ಮೂಲಕ ಸುತ್ತಮುತ್ತಲ ಗ್ರಾಮಗಳಲ್ಲಿ ಮನೆ ಮಾತಾಗಿದ್ದರು.
ಮೂಲತಃ ಕಾರವಾರ ಜಿಲ್ಲೆಯ ಹಳಿಹಾಳ ಗ್ರಾಮದವರಾದ ಶಂಭುಲಿಂಗ ಸ್ವಾಮೀಜಿಗೆ ಕೇವಲ 36 ವರ್ಷ. ಶ್ರೀಗಳ ಅಕಾಲಿಕ ನಿದನದ ಸುದ್ದಿಕೇಳಿ ಮಠದ ಬಳಿ ನೂರಾರು ಭಕ್ತರು ಜಮಾಯಿಸಿ ಆತಂಕ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿ ಸಾವಿನ ಬಗ್ಗೆ ಭಕ್ತರು ಶಂಕೆ ವ್ಯಕ್ತಪಡಿಸಿದ್ದು, ಆಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel