ನಟ ರಮೇಶ್ ಅರವಿಂದ್’ಗೆ ಗೌರವ ಡಾಕ್ಟರೇಟ್ ಪ್ರಧಾನ…
ನಟ ರಮೇಶ್ ಅರವಿಂದ್ ಅವರು ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಕೊಡುಗೆ ನೀಡುತ್ತಾ ಬರುತ್ತಿದ್ದಾರೆ. ನಟನೆಯ ಜತೆಗೆ ಹಲವು ಸಿನಿಮಾಗಳ ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ಕೊಡುಗೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾನಿಲಯದ 10ನೇ ಘಟಿಕೋತ್ಸವ ಸಮಾರಂಭದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.
ರಾಣಿ ಚನ್ನಮ್ಮ ವಿಶ್ವ ವಿದ್ಯಾನಿಲಯದ 10ನೇ ಘಟಿಕೋತ್ಸವ ಇಂದು ಸುವರ್ಣಸೌಧ ಸಭಾಭವನದಲ್ಲಿ ನಡೆಸಲಾಯಿತು. ರಮೇಶ್ ಅರವಿಂದ್, ರವಿಚಂದ್ರನ್ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸೇವೆಗೈದ ಮಾತೆ ಅಕ್ಕ ಅನ್ನಪೂರ್ಣ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಾಕ್ಟರೇಟ್ ಪ್ರದಾನ ಮಾಡಿದ್ದಾರೆ. ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ. ರಾಮಚಂದ್ರೆಗೌಡ ಸೇರಿ ಹಲವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗೌರವ ಡಾಕ್ಟರೇಟ್ ಪ್ರಧಾನದ ಬಳಿಕ ಮಾತನಾಡಿದ ರಮೇಶ ಅರವಿಂದ್ ಈ ಸಮಾರಂಭಲ್ಲಿ ತನ್ನ ತಂದೆ ಇರಬೇಕಿತ್ತು ಎಂದು ಭಾವುಕರಾಗಿದ್ದಾರೆ.
ಟಿಕೆಟ್ ತೆಗೆದುಕೊಂಡು ಚಿತ್ರ ನೊಡಿದ ಪ್ರತಿ ಪ್ರೇಕ್ಷನಿಗೆ ನಾನು ಧನ್ಯವಾದ ಹೇಳುವೆ. ನನ್ನ ಜೊತೆ ನಟಿಸಿದ ಹಲವು ನಾಯಕ ನಾಯಕಿರನ್ನ ನಾನು ಸ್ಮರಿಸುವೆ ನನ್ನ ಸಾಧನೆಗೆ ಎಲ್ಲರ ಸಹಕಾರವೇ ಕಾರಣ ಎಂದಿದ್ದಾರೆ.