ವೀಕ್ ನೆಸ್ ಗಳು ಇರುತ್ವೆ, ಅದನ್ನೇ ಬಂಡವಾಳ ಮಾಡ್ಕೊಬಾರ್ದು : ರಾಜೂಗೌಡ
ಬೆಂಗಳೂರು : ಮನುಷ್ಯ ಅಂದ ಮೇಲೆ ಕೆಲವೊಂದು ವೀಕ್ ನೆಸ್ ಗಳು ಇದ್ದೇ ಇರ್ತಾವೆ. ಆದ್ರೆ ಅವುಗಳನ್ನೇ ಬಂಡವಾಳ ಮಾಡಿಕೊಳ್ಳುವುದು ಸರಿಯಲ್ಲ ಅಂತಾ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ಶಾಸಕ ರಾಜೂಗೌಡ ಬ್ಯಾಟ್ ಬೀಸಿದ್ದಾರೆ.
ರಮೇಶ್ ಜಾಆರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೂಗೌಡ, ರಮೇಶಣ್ಣ ಹಾಗೂ ನಾನು ಸಂಬಂಧಿಕರು. ಸುಮಾರು ವರ್ಷಗಳಿಂದ ಅವರೊಂದಿಗೆ ಉತ್ತಮ ಒಡನಾಟವಿದೆ. ಇದೊಂದು ನೋವಿನ ಸಂಗತಿ. ಯುವತಿಗೆ ರಮೇಶ್ ಜಾರಕಿಹೊಳಿ ಮೋಸ ಮಾಡಿದ್ದಾರೆ ಅಂತ ಹೇಳ್ತಿದ್ದಾರೆ. ಆದ್ರೆ ಆ ವಿಡಿಯೋ ನೋಡಿದ್ರೆ ಮೋಸ ಮಾಡಿದ್ದಾರೆ ಅನ್ಸುತ್ತಾ ಅಂತಾ ಪ್ರಶ್ನೆ ಮಾಡಿದ್ದಾರೆ.
ರಮೇಶ್ ಜಾರಕೊಳಿ ಅವರನ್ನ ಸಿಲುಕಿಸುವ ಉದ್ದೇಶದಿಂದ ಹನಿಟ್ರ್ಯಾಪ್ ರೀತಿ ಇದನ್ನ ಮಾಡಿದ್ದಾರೆ ಎಂದು ಆರೋಪಿಸಿದ ರಾಜೂಗೌಡ, ಈ ಪ್ರಕರಣವನ್ನ ಸಿಬಿಐಗೆ ಒಪ್ಪಿಸಬೇಕು. ರಮೇಶಣ್ಣ ತಪ್ಪು ಮಾಡಿದ್ರೆ ಅವ್ರನ್ಮ ಗಲ್ಲಿಗೇರಿಸಲಿ. ರಾಜಕಿಯ ದೊಡ್ಡ ಹುನ್ನಾರ ನಡೆದಿದೆ ಅನ್ನೋ ಅನುಮಾನ ಕಾಡ್ತಿದೆ ಎಂದು ತಿಳಿಸಿದರು.
ರಾಜಕೀಯ ಷಡ್ಯಂತ್ರಕ್ಕೆ ರಮೇಶಣ್ಣನ ಕುಟುಂಬ ಕಣ್ಣೀರು ಹಾಕ್ತಿದೆ. ರಮೇಶ್ ಜಾರಕಿಹೊಳಿ ಅವ್ರನ್ನ ತುಂಬಾ ದಿನದಿಂದ ಬಲ್ಲವರೇ ಇಂಥದನ್ನ ಮಾಡಿದ್ದಾರೆ. ದಿನೇಶ್ ಕಲ್ಲಹಳ್ಳಿ ಕೇವಲ ದಾಳವನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ. ನಾಲ್ಕೈದು ಸರ್ವರ್ ನಲ್ಲಿ ಇದು ಅಪ್ ಲೋಡ್ ಮಾಡಿದ್ದಾರೆ ಎಂದ ರಾಜೂಗೌಡ ರಮೇಶಣ್ಣ ಆರೋಪ ಮುಕ್ತರಾಗಿ ಆಚೆ ಬರ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದರು.










