ಸಾಹುಕಾರ್ (Ramesh jarakiholi) ಸಿಡಿ ಪ್ರಕರಣ : ಯವತಿ ಯಾರು? ಈಗ ಎಲ್ಲಿದ್ದಾಳೆ..?
ಬೆಂಗಳೂರು : ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರೂ, ಯುವತಿಯ ಜಾಡು ಇನ್ನೂ ಸಿಕ್ಕಿಲ್ಲ.
ಆದ್ರೆ ಆಕೆ ಬೆಂಗಳೂರಿನಲ್ಲೇ ನೆಲೆಸಿದ್ದ ಬಗ್ಗೆ ಹಲವು ಮಾಹಿತಿಗಳು ಲಭ್ಯವಾಗಿವೆ.
ದಿನೇಶ್ ಕಲ್ಲಹಳ್ಳಿ ಮಾಹಿತಿ ನೀಡಿದ್ದ ಪ್ರಕಾರ ಯುವತಿ ಆರ್ ಟಿ ನಗರದಲ್ಲಿ ವಾಸವಿದ್ದಳು ಎಂದಿದ್ದರು.
ಈ ಮಾಹಿತಿಯನ್ನ ಆಧಾರಿಸಿಕೊಂಡು ಪೊಲೀಸರು ಆರ್ ಟಿ ನಗರದ 45ಕ್ಕೂ ಹೆಚ್ಚು ಪಿಜಿಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದ್ರೆ ಯುವತಿಯ ಸುಳಿವು ಮಾತ್ರ ಸಿಕ್ಕಿಲ್ಲ.
ಆರಂಭದಲ್ಲಿ ಪಿಜಿಯಲ್ಲಿದ್ದ ಯುವತಿ ಬಳಿಕ ಪ್ರತ್ಯೇಕ ಮನೆಯಲ್ಲಿ ವಾಸವಿದ್ದಳು ಅನ್ನೋ ಮಾಹಿತಿ ಲಭ್ಯವಾಗಿದೆ.
ಈ ಮನೆಯಲ್ಲಿ ನಾಲ್ಕು ಮಂದಿ ವಾಸವಿದ್ದರಂತೆ. ಸಿಡಿ ರಿಲೀಸ್ ಆಗುತ್ತಿದ್ದಂತೆ ಆಕೆ ಮನೆಯಿಂದ ಹೊರಗಡೆ ಬಂದಿದ್ದಳಂತೆ.
ಮನೆಯಿಂದ ಹೊರಬಂದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಸಿಮ್ ಡಿಆಕ್ಟಿವೇಟ್ ಮಾಡಿದ್ದಾಳೆ. ಮೊಬೈಲ್ ಸ್ವಿಚ್ ಆಫ್ ಮಾಡಿರುವ ವಿಚಾರ ತಾಂತ್ರಿಕ ದಾಖಲೆಗಳಿಂದ ಲಭ್ಯವಾಗಿದೆ.










